ಸುದ್ಧಿಕನ್ನಡ ವಾರ್ತೆ

Goa: ಅಖಿಲ ಭಾರತ 87 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಿದ್ಧಾಪುರದಲ್ಲಿ ಭುವನೇಶ್ವರಿ ತಾಯಿಯ ರಥಕ್ಕೆ ರಾಜ್ಯಾಧ್ಯಕ್ಷರಾದ ಡಾ,ಮಹೇಶ್ ಜೋಶಿ ರವರು ಭಾನುವಾರ ಚಾಲನಡ ನೀಡಿದರು. ಈ ರಥವು ಕಾರವಾರ ಮಾರ್ಗವಾಗಿ ಗೋವಾ ಕನ್ನಡಿಗರಿಗೆ ಆಶೀರ್ವಾದ ಮಾಡಲು ತಾಯಿಯೇ ಇಲ್ಲಿಗೆ ಆಗಮಿಸಿದ್ದಾಳೆ. ಇದು ನಮ್ಮ ಸೌಭಾಗ್ಯ ಎಂದು ಕಸಾಪ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ನುಡಿದರು.

ಸಿದ್ಧಾಪುರದ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ 87 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆಗೆ ಭಾನುವಾರ ಚಾಲನೆ ನೀಡಕಾಗಿತ್ತು. ಈ ರಥ ಯಾತ್ರೆಯು ಗೋವಾ ರಾಜ್ಯದ ಕಾಣಕೋಣಕ್ಕೆ ಸೋಮವಾರ ಮಧ್ಯಾನ್ಹ ಕಾರವಾರ ಮಾರ್ಗವಾಗಿ ಆಗಮಿಸಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಗೋವಾದಲ್ಲಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಗೋವಾದಲ್ಲಿ ತಾಯಿ ಭುವನೇಶ್ವರಿ ಕನ್ನಡಿಗರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಿ. ಇದು ನಮ್ಮ ಸೌಭಾಗ್ಯ ಎಂದು ಸಿದ್ಧಣ್ಣ ಮೇಟಿ ನುಡಿದರು.

ಗೋವಾದ ಕಾಣಕೋಣಕ್ಕೆ ಆಗಮಿಸಿದ ರಥವನ್ನು ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣದ ಚಾವಡಿಯ ವರೆಗೆ ಮೆರವಣಿಗೆಯ ಮೂಲಕ ಬರಮಾಡಿಕೊಂಡು ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ತಾಯಿ ಭುವನೇಶ್ವರಿಯ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗೋವಾ ರಾಜ್ಯದ ಎಲ್ಲೆಡೆಯಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಬೃಹತ್ ಸಂಖ್ಯೆಯಲ್ಲಿ ಮಾತೆಯರು ಉಪಸ್ಥಿತರಿದ್ದು ಭವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಪೂರ್ಣ ಕುಂಭ ಸ್ವಾಗತ ಕೋರಿ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡರು. ಡೋಲು, ವಾದ್ಯ, ನೃತ್ಯ ದೊಂದಿಗೆ ಕನ್ನಡಿಗರು ರಾಜ್ಯೋತ್ಸವವನ್ನೇ ಆಚರಿಸಿ ಭುವನೇಶ್ವರಿ ತಾಯಿಯ ರಥದ ಮೆರವಣಿಗೆಯಲ್ಲ ಪಾಲ್ಗೊಂಡರು.

ಈ ಸಂದರ್ಭದಲ್ಲಿ ವಿಜಯಪುರ ಜಿಪಂ ಮಾಜಿ ಅಧ್ಯಕ್ಷೆ ನಿಲಮ್ಮ ಮೇಟಿ, ಕಸಾಪ ಗೋವಾ ರಾಜ್ಯ ಘಟಕದ ಗೌ ಕಾರ್ಯದರ್ಶಿ ನಾಗರಾಜ್ ಗೋಂದಕರ್, ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಗೋವಾ ಬಿಜೆಪಿ ಕರ್ನಾಟಕ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ, ಪಣಜಿ ತಾಲೂಕಾ ಘಟಕದ ಅಧ್ಯಕ್ಷ ಹನುಮಂತ ಗೊರವರ್, ಸಾಲಸೇಟ್ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ್ ಬನ್ನಿಕೊಪ್ಪ, ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಗೋವಾ ಬಿಜೆಪಿ ಕರ್ನಾಟಕ ಸೆಲ್ ದಕ್ಷಿಣ ಗೋವಾ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಉತ್ತರ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಬಿಎನ್ ವಾಸರೆ, ಕಾರವಾರ ಕಸಾಪ ತಾಲೂಕಾ ಅಧ್ಯಕ್ಷ ರಾಮಾ ನಾಯ್ಕ, ಕಸಾಪ ಪದಾಧಿಕಾರಿ ಬಾಬು ಶೇಖ್, ಮನೋಜ್, ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.