ಸುದ್ದಿಕನ್ನಡ ವಾರ್ತೆ
Goa : ಗೋವಾ ರಾಜ್ಯಾದ್ಯಂತ ಮಳೆ ಮುಂದುವರೆದಿದೆ. ಮೇ 25 ರ ವರೆಗೆ ಗೋವಾ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಹವಾಮಾನ ಇಲಾಖೆ ರೆಡ್ ಅಲರ್ಟ ಘೋಷಿಸಿದೆ.

ಗೋವಾ ರಾಜ್ಯದಲ್ಲಿ ಸದ್ಯದ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಆಪತ್ಕಾಲೀನ ವ್ಯವಸ್ಥಾಪನ ಪ್ರಾಧಿಕಾರ ಉತ್ತಮ ಮತ್ತು ದಕ್ಷಿಣ ಗೋವಾದಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಬಾರದು. ನದಿಯ ಬಳಿ ಹೋಗಬಾರದು. ವಿದ್ಯುತ್ ಕಂಬ, ಮರ ಮತ್ತು ಬೃಹತ್ ಗೋಡೆಯ ಪಕ್ಕದಲ್ಲಿ ನಿಲ್ಲದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೂ-0832-2225383 ಸಂಪರ್ಕಿಸಬಹುದಾಗಿದೆ.