ಸುದ್ದಿಕನ್ನಡ ವಾರ್ತೆ
Goa : ಗೋವಾ ರಾಜ್ಯದಲ್ಲಿ ಹೊಸ ಶೈಕ್ಷಣಿಕ ಧೋರಣೆಯ ಅಡಿಯಲ್ಲಿ 6 ರಿಂದ 12 ನೇಯ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಏಪ್ರಿಲ್ ನಲ್ಲಿ ತರಗತಿಯನ್ನು ತೆಗೆದುಕೊಳ್ಳಲಾಗಿತ್ತು. ಮೇ ತಿಂಗಳಲ್ಲಿ ಈ ವಿದ್ಯಾರ್ಥಿಗಳಿಗೆ ನೀಡಿದ್ದ ಬೇಸಿಗೆ ರಜೆ ಜೂನ್ 3 ರಂದು ಮುಕ್ತಾಯಗೊಳ್ಳಲಿದ್ದು ಗೋವಾದಲ್ಲಿ ಜೂನ್ 4 ರಿಂದ ಶೈಕ್ಷಣಿಕ ತರಗತಿಗಳು ಆರಂಭಗೊಳ್ಳಲಿದೆ. ಪ್ರಸಕ್ತ ವರ್ಷದಿಂದ ಹತ್ತನೇಯ ತರಗತಿಗೆ ರಾಷ್ಟ್ರೀಯ ಶಿಕ್ಷಣ ಧೋರಣೆಯ ಅಡಿಯಲ್ಲಿ ಹೊಸ ಅಭ್ಯಾಸ ಕ್ರಮವನ್ನು ಆರಂಭಿಸಲಾಗಿದೆ.
ಗೋವಾದಲ್ಲಿ ಹೊಸ ಶೈಕ್ಷಣಿಕ ಧೋರಣೆಯ ಅಡಿಯಲ್ಲಿ ಹಲವು ಕೌಶಲ್ಯಾಧಾರಿತ ಹೊಸ ವಿಷಯ ಆರಂಭಗೊಳ್ಳಲಿದೆ. ಈ ಹೊಸ ವಿಷಯದ ತರಗತಿ ಗೆತೆದುಕೊಳ್ಳಲು ಅಗತ್ಯವಿರುವ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆಯ ನಿರ್ದೇಶಕ ಶೈಲೇಶ ಜಿಂಗಡೆ ಮಾಹಿತಿ ನೀಡಿದರು.