ಸುದ್ದಿಕನ್ನಡ ವಾರ್ತೆ
Goa ; ಭಾರತ-ಪಾಕ್ ಗಡಿಯಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗೋವಾದಲ್ಲಿ ಉತ್ತರಗೋವಾ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಬಾಂಬ್ ಬೆದರಿಕೆ ಕರೆ ಬಂದಿದೆ. ಬಾಂಬ್ ನಿಷ್ಕ್ರೀಯ ದಳ ಹಾಗೂ ಪೋಲಿಸ್ ತಂಡ ಘಟನಾ ಸ್ಥಳಕ್ಕೆ ಬಂದು ತಪಾಸಣಾ ಕಾರ್ಯ ಕೈಗೊಂಡರು.
ಉತ್ತರ ಗೋವಾ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಬಾಂಬ್ ಬೆದರಿಕೆಯ ಮೇಲ್ ಬಂದಿದೆ. ಶುಕ್ರವಾರ ಮಧ್ಯಾನ್ಹ 3.30 ರ ಒಳಗೆ ಕಛೇರಿಯನ್ನು ಖಾಲಿ ಮಾಡಿ ಇಲ್ಲದಿದ್ದರೆ ಬಾಂಬ್ ಬ್ಲಾಸ್ಟ ಆಗಲಿದೆ ಎಂದು ಈ-ಮೇಲ್ ಮೂಲಕ ಬೆದರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕ ತಪಾಸಣಾ ಕಾರ್ಯ ಕೈಗೊಳ್ಳಲಾಗಿದೆ.
ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಕಛೇರಿಯ ಎಲ್ಲ ಸಿಬ್ಬಂಧಿಗಳನ್ನು ಹೊರಕ್ಕೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಅಧಿಕ ಬಂಧೋಬಸ್ತ ಕಲ್ಪಿಸಲಾಗಿದೆ. ಈ ಹಿಂದೆಯೂ ಕೂಡ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾಪೀಠ, ಗೋವಾ ಪೋಲಿಸ್ ಮುಖ್ಯಾಲಲ ಸ್ಫೋಟಿಸುವುದಾಗಿಯೂ ಬೆದರಿಕೆ ಕರೆ ಬಂದಿತ್ತು. ನಂತರ ತಪಾಸಣೆಯ ನಂತರ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿತ್ತು.
ಭಾರತ ಮತ್ತು ಪಾಕ್ ಗಡಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಉಧ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಆಪರೇಶನ್ ಸಿಂಧೂರ್ ಹೆಸರಿಯಲ್ಲಿ ಭಾರತವು ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದೆ. ಉತ್ತರ ಗೋವಾ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಶುಕ್ರವಾರ ಬಾಂಬ್ ಬೆದರಿಕೆ ಬಂದಿದ್ದು ಪೋಲಿಸ್ ಹಾಗೂ ಬಾಂಬ್ ನಿಷ್ಕ್ರೀಯ ದಳ ತೀವ್ರ ತಪಾಸಣೆ ಕೈಗೊಂಡವು. ಈ ಘಟನೆಯಿಂದಾಗಿ ಆತಂಕದ ಪರಿಸ್ಥಿತಿ ಮನೆ ಮಾಡಿತ್ತು.