ಸುದ್ದಿಕನ್ನಡ ವಾರ್ತೆ
Goa : ಆಪರೇಷನ್ ಸಿಂಧೂರ್ ನಂತರ, ಗೋವಾ ರಾಜ್ಯದಲ್ಲಿ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ ಮತ್ತು ರಾಜ್ಯಾದ್ಯಂತ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಕರಾವಳಿ ಮತ್ತು ಪ್ರವಾಸಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಗೋವಾ ರಾಜ್ಯ ಪೆÇಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಕೇಂದ್ರ ಮತ್ತು ಭದ್ರತಾ ಸಂಸ್ಥೆಗಳ ಸಮನ್ವಯದೊಂದಿಗೆ ಸಭೆಗಳು ನಡೆಯುತ್ತಿವೆ. ಬುಧವಾರ ಗೋವಾ ರಾಜ್ಯದಲ್ಲಿ ಅಣಕು ಪ್ರದರ್ಶನವನ್ನೂ ನಡೆಸಲಾಯಿತು ಮತ್ತು ತುರ್ತು ಸಂದರ್ಭದಲ್ಲಿ ವ್ಯವಸ್ಥೆಗಳ ಸನ್ನದ್ಧತೆಯನ್ನು ಪರೀಕ್ಷಿಸಲಾಯಿತು. ಗೃಹ ಸಚಿವಾಲಯದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಪೆÇಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ಸಭೆಯಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ಗೌಪ್ಯವಾಗಿದ್ದವು ಎಂದು ಹೇಳಿದರು.