ಸುದ್ದಿಕನ್ನಡ ವಾರ್ತೆ
Goa : ವಿಕಸಿತ ಭಾರತ ಸಂಕಲ್ಪದಿಂದ 2047 ಸ್ವಾತಂತ್ರ್ಯ ಶತಾಬ್ದಿ ವರ್ಷದಲ್ಲಿ ಭಾರತ ಒಂದು ಸರ್ವಶ್ರೇಷ್ಠ ಹಾಗೂ ಶಕ್ತಿಮಾನ್ ರಾಷ್ಟ್ರವಾಗಲಿದೆ ಎಂದು ಕೇದ್ರ ರಕ್ಷಷಣಾ ಖಾತೆಯ ರಾಜ್ಯ ಮಂತ್ರಿ ಸಂಜಯ ಸೇಠ್ ನುಡಿದರು. ಗೋವಾ ಶಿಪ್ ಯಾರ್ಡ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಗೋವಾ ಶಿಪ್ ಯಾರ್ಡ ನಿರ್ಮಿಸಿರುವ ಎರಡನೇಯ ಫ್ರಿಗೇಟ್ ನೌಕೆಯ ಉಧ್ಘಾಟನೆ ನೆರವೇರಿಸಿ ಸಂಜಯ ಸೇಠ್ ಮಾತನಾಡುತ್ತಿದ್ದರು. ಈ ನೌಕೆಯ ತವಸ್ಯ ಎಂದು ನಾಮಕಕರಣ ಮಾಡಲಾಯಿತು.

ಈ ಸಂದರ್ಭದಲ್ಲಿ ಗೋವಾ ಶಿಪ್ ಯಾರ್ಡ ಅಧ್ಯಕ್ಷ ಬ್ರಜೇಶ ಕುಮಾರ್, ಪಶ್ಚಿಮ ನೌಕಾದಳದ ಧ್ವಜ ಅಧಿಕಾರಿ ವಾಯ್ಸ ಎಡ್ಮಿರಲ್ ಸಂಜಯ್ ಸಿಂಗ್, ವಾಯ್ಸ ಎಡ್ಮಿರಲ್ ರಾಜಾರಾಮ ಸ್ವಾಮಿನಾಥನ್, ಸಂಸದ ವಿರಿಯಾಟೊ ಫರ್ನಾಂಡೀಸ್, ರಾಜ್ಯಸಭಾ ಸದಸ್ಯ ಸದಾನಂದ ಶೇಠ್ ತಾನಾವಡೆ, ವಾಸ್ಕೊ ಶಾಸಕ ಕೃಷ್ಣಾ ಸಾಲಕರ್, ನೌಕಾದಳದ ಅಧಿಕಾರಿಗಳು, ಗೋವಾ ಶಿಪ್ ಯಾರ್ಡ ಅಧಿಕಾರಿಗಳು ಉಪಸ್ಥಿತರಿದ್ದರು.