ಸುದ್ದಿಕನ್ನಡ ವಾರ್ತೆ
Goa : ಕಳೆದ ಸುಮಾರು ಹತ್ತು ವರ್ಷಗಳಿಂದ ಗೋವಾ ಪ್ರವೇಶಿಸದಂತೆ ನಿಷೇಧ ಹೇರಲಾಗಿದ್ದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರವರು ಇದೀಗ ಗೋವಾ ಪ್ರವೇಶಿಸಿದ್ದಾರೆ. ಅವರು ಪಣಜಿಯಲ್ಲಿ ‘ಭಾರತ್ ಮಾತಾ ಕಿ ಜೈ’ ಸಂಘಟನೆಯ ಸ್ಥಾಪಕ ಸುಭಾಷ್ ವೆಲಿಂಗಕರ್ ಅವರನ್ನುÀ್ಮುತಾಲಿಕ್ ಭೇಟಿಯಾದರು.
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ರವರು ಗೋವಾ ಪ್ರವೇಶಿಸದಂತೆ ಗೋವಾ ಸರ್ಕಾರವು ನಿಷೇಧ ಹೇರಿತ್ತು. ಈ ನಿಷೇದಧ ಅವಧಿಯನ್ನು ಗೋವಾ ಸರ್ಕಾರ ಹಂತ ಹಂತವಾಗಿ ವಿಸ್ತಸಿಸುತ್ತಲೇ ಇತ್ತು. ಗೋವಾಕ್ಕೆ ಪ್ರಮೋದ ಮುತಾಲಿಕ್ ಆಗಮಿಸಿರುವುದು ಇದೀಗ ಅವರಿಗೆ ಗೋವಾಕ್ಕೆ ಪ್ರವೇಶಿಸದಂತೆ ಹೇರಿದ್ದ ನಿಷೇಧ ತೆರವುಗೊಂಡಂತಾಗಿದೆ.