ಸುದ್ದಿಕನ್ನಡ ವಾರ್ತೆ
Goa/Belagavi: ಕರ್ನಾಟಕದ ಬೆಳಗಾವಿಯಿಂದ ಗೋವಾಕ್ಕೆ ನಿರಂತರವಾಗಿ ಅಕ್ರಮ ಗೋಮಾಂಸ ಸಾಗಣೆ ಮಾಡುತ್ತಿರುವುದು ಬಹಿರಂಗವಾಗಿದೆ. ಗೋವಾದ ಕೇರಿಯ ಚೆಕ್ ಪಾಯಿಂಟ್ ನಲ್ಲಿ ಕಾರ್ಯಾಚರಣೆ ನಡೆಸಿ ಎರಡು ವಾಹನಗಳಿಂದ ಸುಮಾರು 500 ಕೆಜಿ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಗೋಮಾಂಸದ ಬೆಲೆ 2 ಲಕ್ಷ 75 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಪೆÇಲೀಸರು ಗೋಮಾಂಸ ಮತ್ತು ಎರಡು ವಾಹನಗಳು ಸೇರಿದಂತೆ 18 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋವಾದ ಡಿಚೋಲಿ ಉಪ ಪೆÇಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಳವಿ ಮತ್ತು ವಾಲ್ಪೈ ಪೆÇಲೀಸ್ ಇನ್ಸ್ ಪೆಕ್ಟರ್ ವಿದೇಶ್ ಶಿರೋಡ್ಕರ್ ಅವರು, ಪೆÇಲೀಸ್ ಸಬ್-ಇನ್ಸ್‍ಪೆಕ್ಟರ್ ಪ್ರಥಮೇಶ್ ಗವಾಸ್, ನೌಕರರಾದ ಸೋಮನಾಥ್ ಉಸ್ತೇಕರ್, ನಿಖಿಲ್ ಗವಾಸ್ ಮತ್ತು ಸಂಗೀತಾ ಜೋರ್ ಅವರು ಕೇರಿಯ ಚೆಕ್ ಪಾಯಿಂಟ್ ನಲ್ಲಿ ವಾಹನಗಳ ಶೋಧ ನಡೆಸುತ್ತಿದ್ದಾರೆ ಎಂದು ಹೇಳಿದರು. ಮಧ್ಯಾಹ್ನ 2:30 ರ ಸುಮಾರಿಗೆ, ಹಸಿರು ಹುಂಡೈ ಕಾರು ಮತ್ತು ಬೆಳಿ ಬಣ್ಣದ ಟೊಯೋಟಾ ಎಟಿಯೋಸ್ ಎರಡರಲ್ಲೂ ಶೋಧ ನಡೆಸಲಾಯಿತು. ಈ ವಾಹನಗಳಲ್ಲಿ ಹೆಚ್ಚಿನ ಪ್ರಮಾಣದ ಗೋಮಾಂಸ ಪತ್ತೆಯಾಗಿದೆ.
ಈ ಸಂಬಂಧ ದಾಖಲೆಗಳನ್ನು ಕೋರಿದಾಗ, ಯಾವುದೇ ದಾಖಲೆಗಳು ಸಿಗಲಿಲ್ಲ. ಇದರಿಂದಾಗಿ, ಸಂಬಂಧಪಟ್ಟ ಪೆÇಲೀಸರು ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದರು.
ಗೋಮಾಂಸವನ್ನು ಅಕ್ರಮವಾಗಿ ಸಾಗಿಸಿದ ಆರೋಪದ ಮೇಲೆ ಪೆÇಲೀಸರು ಅಮಾನಲಿ ಹುಸೇನ್‍ಸಾಬ್ ದೇಸಾಯಿ (23, ಜುವಾರಿ ನಗರ, ಮುಗಾರ್ಂವ್), ಸೈಯದ್ ಅಮೀನ್‍ಸಾಬ್ ಮೊಕಾಶಿ (29, ಮಂಗೂರ್‍ಹಿಲ್, ಮುಗಾರ್ಂವ್), ಸೊಹೈಲ್ ಸಲೀಂ ನಾಯಕ್ವಾಡಿ (28, ಉಜ್ವಲ್‍ನಗರ, ಬೆಳಗಾವಿ), ಮತ್ತು ಇರ್ಫಾನ್ ಆಸಿಬ್ ಬಾಗವಾನ್ (23, ಆಜಾದ್ ನಗರ, ಬೆಳಗಾವಿ) ಅವರನ್ನು ಬಂಧಿಸಿದರು.
ವಶಪಡಿಸಿಕೊಂಡ ಗೋಮಾಂಸದ ಮಾರುಕಟ್ಟೆ ಮೌಲ್ಯ 2.75 ಲಕ್ಷ ರೂ. ಎಂದು ಪೆÇಲೀಸರು ಅಂದಾಜಿಸಿದ್ದಾರೆ. ಅದೇ ರೀತಿ, ಅಕ್ರಮ ಸಾಗಣೆಗೆ ಬಳಸಿದ್ದ ಎರಡೂ ವಾಹನಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಪರಿಣಾಮವಾಗಿ, ಪೆÇಲೀಸರು ಸುಮಾರು 18 ಲಕ್ಷ ರೂ. ಮೌಲ್ಯದ ವಿವಿಧ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರೀಯ ಪೋಲಿಸ್ ಅಧಿಕಾರಿ ಜಿವ್ಬಾ ದಳವಿ ಹೇಳಿದರು.
ಹದಿನೈದು ದಿನಗಳ ಹಿಂದೆಯೂ ಇದೇ ರೀತಿಯ ತಪಾಸಣೆ ನಡೆಸಿ ಅಕ್ರಮ ಗೋಮಾಂಸ ಸಾಗಿಸುವ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದೇ ರೀತಿ, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಕರ್ನಾಟಕದಿಂದ ಗೋವಾಕ್ಕೆ ಅಕ್ರಮ ಗೋಮಾಂಸ ಮಾರಾಟ ದಂಧೆ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ.