ಸುದ್ಧಿಕನ್ನಡ ವಾರ್ತೆ
ಪಣಜಿ: ಕರಾವಳಿ ಪ್ರದೇಶಗಳಲ್ಲಿ ಮನೆ ಮತ್ತು ಇತರ ನಿರ್ಮಾಣಗಳ ಯೋಜನೆ ಬದಲಾವಣೆಯ ಸಂದರ್ಭದಲ್ಲಿ, ಈಗ ಮೂಲ ಶುಲ್ಕದ ಶೇಕಡಾ 10 ರಷ್ಟು ಪಾವತಿಸಬೇಕಾಗುತ್ತದೆ. ಗೋವಾ ರಾಜ್ಯ ಸರ್ಕಾರದಿಂದ ಶುಲ್ಕ ಬದಲಾವಣೆ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ, ಬೀಚ್ ವೆಡ್ಡಿಂಗ್ ಗೆ ಈಗ ದಿನಕ್ಕೆ ಒಂದು ಲಕ್ಷ ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಹಿಂದೆ ಇಡೀ ಸಮಾರಂಭಕ್ಕೆ 1 ಲಕ್ಷ ರೂ. ಶುಲ್ಕ ವಿಧಿಸಲಾಗುತ್ತಿತ್ತು. ಇದರಿಂದಾಗಿ ಗೋವಾಕ್ಕೆ ಬಂದು ಬೀಚ್ ವೆಡ್ಡಿಂಗ್ ಮಾಡಿಕೊಳ್ಳಬೇಕು ಎಂದು ಅಂದುಕೊಂಡವರಿಗೆ ಹೆಚ್ಚಿನ ಹಣ ವ್ಯಯಿಸುವುದು ಅನಿವಾರ್ಯವಾಗಲಿದೆ.
ಮನೆ ನಿರ್ಮಾಣ, ರಿಪೇರಿ ಮತ್ತು ಛತ್ರಗಳನ್ನು ನಿರ್ಮಿಸಲು ಮುಂಗಡ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ, ಈಗ ಪ್ಲಾನ್ ಬದಲಾಯಿಸಲು ಆ ಶುಲ್ಕದ ಶೇಕಡಾ 10ರಷ್ಟು ಪಾವತಿಸಬೇಕಾಗುತ್ತದೆ. ಮನೆಗಳ ದುರಸ್ತಿ ಅಥವಾ ನವೀಕರಣಕ್ಕಾಗಿ 25,000 ಗಳಿಗೆ ಶುಲ್ಕವನ್ನು ಗೋವಾ ಸರ್ಕಾರ ಹೆಚ್ಚಳ ಮಾಡಿದೆ.
ಈ ಹಿಂದೆ ಬೀಚ್ ಮದುವೆ ಅಥವಾ ಇತರೆ ಸಮಾರಂಭಗಳಿಗೆ ಒಟ್ಟು ಒಂದು ಲಕ್ಷ ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಇದಕ್ಕಾಗಿ ದಿನಕ್ಕೆ ಒಂದು ಲಕ್ಷ ರೂ. ವಿಧಿಸಲಾಗುತ್ತಿದೆ. ಈ ಮೊದಲು ಮದುವೆಯ ಇಡೀ ಸಮಾರಂಭಕ್ಕೆ ಸೇರಿ 1 ಲಕ್ಷ ರೂ ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ದಿನವೊಂದಕ್ಕೆ 1 ಲಕ್ಷ ರೂ ವಿಧಿಸಲಾಗುತ್ತಿರುವುದರಿಂದ ಎರಡು ಮೂರು ದಿನದ ಇಡೀ ಸಮಾರಂಭಕ್ಕೆ ಹೆಚ್ಚಿನ ಹಣ ವ್ಯಯಿಸುವ ಅನಿವಾರ್ಯತೆಯಿದೆ. ಶಿಕ್ಷಣ ಸಂಸ್ಥೆಗಳು, ದತ್ತಿ ಸಂಸ್ಥೆಗಳು ಮತ್ತು ಸರ್ಕಾರಿ ನಿಗಮಗಳು ಶೇಕಡಾ 75 ರಷ್ಟು ಶುಲ್ಕ ವಿನಾಯಿತಿಯನ್ನು ಪಡೆಯುತ್ತವೆ. ತೆರೆದ ಸಭಾಂಗಣಕ್ಕೆ ಚದರ ಮೀಟರ್ಗೆ 5 ಲಕ್ಷ ರೂ. ಮತ್ತು ತಾತ್ಕಾಲಿಕ ನಿರ್ಮಾಣಕ್ಕೆ ಚದರ ಮೀಟರ್ಗೆ 400 ರೂ. ಶುಲ್ಕ ಹೆಚ್ಚಳ ಮಾಡಲಾಗಿದೆ.