ಸುದ್ದಿಕನ್ನಡ ವಾರ್ತೆ
Goa: ಗೋವಾ ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸೇತುವೆಯ ಅಂಚು ಅಪಾಯಕಾರಿ ಸ್ಥಿತಿಯಲ್ಲಿದೆ. ಇಲ್ಲಿ ಗುತ್ತಿಗೆದಾರರು ಕೈಗೊಂಡಿರುವ ಕಳಪೆ ಕಾಮಗಾರಿ ಬಯಲಾಗಿದೆ.

ಗೋವಾ-ಬೆಳಗಾವಿ ಈ ರಾಷ್ಟ್ರೀಯ ಹೆದ್ದಾರಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಟ ನಡೆಸುವ ಮುಖ್ಯ ಹೆದ್ದಾರಿಯಾಗಿದೆ. ಇಲ್ಲಿ ಮೇಲ್ನೋಟಕ್ಕೆ ರಸ್ತೆ ಉತ್ತವಾಗಿದ್ದರೂ ಕೂಡ ಕಳಪೆ ಕಾಮಗಾರಿ ನಡೆದಿರುವುದು ಬಹಿರಂಗವಾಗಿದೆ.

ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ಬಳಿ ರಸ್ತೆ ಬದಿಯಲ್ಲಿ ವಾಹನ ತೆಗೆದುಕೊಂಡು ಹೋದರೆ ರಸ್ತೆಯೇ ಕುಸಿದು ಬೀಳುವ ಆತಂಕವಿದೆ. ಇಲಾಖೆಯು ಕೂಡಲೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.

ಹುಬ್ಬಳ್ಳಿ-ಬೆಳಗಾವಿ -ಗೋವಾ ಮಾರ್ಗಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಇದೇ ಮಾರ್ಗದಲ್ಲಿ ಭಾರಿ ವಾಹನಗಳು ಓಡಾಟ ನಡೆಸುತ್ತವೆ. ಇಂತಹ ಭಾರಿ ವಾಹನಗಳ ಓಡಾಟದ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ. ರಸ್ತೆಯ ಬದಿಯನ್ನು ಮರಳು ಚೀಲ ರಾಶಿಹಾಕಿ ಯಾವುದೇ ತಡೆಗೋಡೆಯಿಲ್ಲದೆಯೇ ನಿರ್ಮಿಸಿರುವುದು ಬೆಳಕಿಗೆ ಬಂದಿದೆ.