ಸುದ್ಧಿಕನ್ನಡ ವಾರ್ತೆ
Goa: ಕರ್ನಾಟಕದಿಂದ ಗೋವಾಕ್ಕೆ ಬರುತ್ತಿದ್ದ ಹಾಲು ತುಂಬಿದ ಟ್ಯಾಂಕರ್ ಚೋರ್ಲಾ ಘಾಟ್ ನಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಷ್ಟು ಹೊತ್ತಿಗಾಗಲೇ ಬೆಂಕಿ ಹೊತ್ತಿ ಉರಿಯುತ್ತಿತ್ತು ಎನ್ನಲಾಗಿದೆ.
ಕೆಎ-59, 7527 ಕ್ರಮಾಂಕದ ಹಾಲು ತುಂಬಿದ ಟ್ಯಾಂಕರ್ ಗೋವಾದ ಚೋರ್ಲಾ ಘಾಟ್ ನಲ್ಲಿ ಬೆಂಕಿಗಾಹುತಿಯಾಗಿದೆ. ಈ ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಪ್ರಮಾಣದ ನಷ್ಠವಾಗಿದೆ.