ಸುದ್ಧಿಕನ್ನಡ ವಾರ್ತೆ
Goa : ಗೋವಾ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ದೋನಾಪಾವುಲ್ ನಿಂದ ವಾಸ್ಕೊ ಮುರಗಾಂವ ಬಂದರಿಗೆ ರೋಪ್ ವೇ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ( Construction of ropeway from Donapaul to Muragaon port in Goa). ಸುಮಾರು 400 ಕೋಟಿ ರೂಗಳ ಯೋಜನೆಯನ್ನು ಮುಎಆಂವ ಬಂದರು ಪ್ರಾಧಿಕಾರ ಮತ್ತು ಗೋವಾ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಯೋಜನೆ 2028 ರ ವೇಳೆಗೆ ಪೂರ್ಣಗೊಳ್ಳು ಸಾಧ್ಯತೆಯಿದೆ.
ಸುಮಾರು 4 ಕಿಲೋಮೀಟರ್ ಉದ್ಧದ ಈ ರೋಪ್ ವೇ ಯೋಜನೆಯು ಜುವಾರಿ ನದಿಗೆ ಅಡ್ಡಲಾಗಿ ದೋನಾಪಾವುಲ್ ಮತ್ತು ಮುರಗಾಂವ ಬಂದರನ್ನು ಸಂಪರ್ಕಿಸುತ್ತದೆ. ದೋನಾಪಾವುಲ್ ನಿಂದ ಮುರ್ಗಾಂವ ಬಂದರನ್ನು ರಸ್ತೆಯ ಮಾರ್ಗವಾಗಿ ತಲುಪಲು 45 ನಿಮಿಷಗಳು ಹಿಡಿಯುತ್ತದೆ. ಆದರೆ ರೋಪ್ ವೇ ಯೋಜನೆಯಿಂದಾಗಿ ಇವುಗಳ ಡುವಿನ ಅಂತರ 4.60 ಕಿಲೋಮೀಟರ್ ಗಳಷ್ಟಾಗಲಿದೆ. ಮುರಗಾಂವ ಬಂದರಿನಿಂದ ದೋನಾಪಾವುಲ್ ಗೆ ಕೇವಲ 15 ನಿಮಿಷದಲ್ಲಿ ಬಂದು ತಲುಪಬಹುದಾಗಿದೆ.
ಈ ಸಂಪೂರ್ಣ ಯೋಜನೆಯನ್ನು ಎಂಪಿಎ ಮತ್ತು ಗೋವಾ ಪ್ರವಾಸೋದ್ಯಮ ಇಲಾಖೆ ಯ ಸಹಯೋಗದಲ್ಲಿ ಇಪಿಸಿ ಆಧಾರದ ಮೇಲೆ ಕಾರ್ಯಗತಗೊಳಿಸಲಾಗುತ್ತದೆ. ಈ ಯೋಜನೆಯ ಡಿಪಿಆರ್ ನ್ನು ಪ್ರಸಕ್ತವರ್ಷವೇ ಸಿದ್ಧಪಡಿಸಿ ಅನುಮೋದಿಸಲಾಗಿದೆ. ಈ ಕುರಿತ ಪರವಾನಗಿ ಲಭಿಸಿದ ನಂತರ ಈ ಯೋಜನೆಯ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಎಗಾಂವ ಬಂದರು ಮತ್ತು ದೋನಾಪಾವುಲ್ ನಲ್ಲಿ ತನ್ನದೇ ಆದ 2,000 ಚದರ ಮೀಟರ್ ರೋಪ್ ವೇ ನಿಲ್ದಾಣದ ನಿರ್ಮಾಣಕ್ಕಾಗಿ ಎಂಪಿಎ ಭೂಮಿಯನ್ನು ಅಧಿಸೂಚನೆ ಮಾಡಿದೆ. ಈ ಯೋಜನೆಯು ಪ್ರವಾಸಿಗರ ಪ್ರಮುಖ ಆಕರ್ಷಣೆಯೂ ಆಗಲಿದೆ. ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಸಂಪರ್ಕ ಸಮಯವನ್ನೂ ಕಡಿಮೆ ಮಾಡಲಿದೆ.