ಸುದ್ಧಿಕನ್ನಡ ವಾರ್ತೆ
ನವದೆಹಲಿ: ಇಲ್ಲಿನ ಕರ್ತವ್ಯಪಥದಲ್ಲಿ 76 ನೇಯ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ ಗೋವಾ ರಾಜ್ಯದ ಸ್ಥಬ್ದಚಿತ್ರವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಯಿತು.
ಸುವಣ್ ಭಾರತ, ಪರಂಪರೆ ಮತ್ತು ಅಭಿವೃದ್ಧಿ ಎಂಬ ವಿಷಯದ ಮೇಲೆ ಗೋವಾದ ಸ್ಥಬ್ದಚಿತ್ರ ಸಿದ್ಧಪಡಿಸಲಾಗಿತ್ತು. ಗೋವಾದ ಶ್ರೀಮಂತ ಸಂಸ್ಕøತಿ, ಪರಂಪರೆ, ಮತ್ತು ಪ್ರಗತಿಯನ್ನು ಸಂಗೀತ ನೃತ್ಯದ ರೋಮಾಂಚಕ ಪ್ರದರ್ಶನ ನೀಡಲಾಯಿತು.
ಗೋವಾ ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಅಡಿಯಲ್ಲಿ ನಿರ್ಮಾಣಗೊಂಡಿದ್ದ ಸ್ಥಬ್ದ ಚಿತ್ರ ಮೆರವಣಿಗೆಯ ಸಂದರ್ಭದಲ್ಲಿ ಪ್ರೇಕ್ಷಕರು ಎಚ್ಚುನಿಂತು ಚಪ್ಪಾಳೆ ತಟ್ಟಿದರು.
ಗೋವಾದ ಈ ಸ್ಥಬ್ದಚಿತ್ರ ದೇವಾಲಯ ರಾಜ್ಯದ ಕಲಾತ್ಮಕ ಪರಂಪರೆಯನ್ನು ಬಿಂಭಿಸುವಂತಿತ್ತು. ಪ್ರಕೃತಿ ಮತ್ತು ಹಳ್ಳಿಯ ಜೀವನ ಶೈಲಿಯನ್ನು ಕೂಡ ಬಿಂಭಿಸಿತು.