ಸುದ್ಧಿಕನ್ನಡ ವಾರ್ತೆ
Goa: ಗಂಗಾ ನದಿಯಲ್ಲಿ ಮುಳುಗಿ ಏಳುವುದರಿಂದ ಬಡತನ ನಿರ್ಮೂಲನೆಯಾಗುತ್ತದೆಯೇ…? ಹೊಟ್ಟೆಗೆ ಊಟ ಸಿಗುತ್ತದೆಯೇ…? ಎಂದು ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿಂದುಗಳ ಭಾವನೆಗೆ ಧಕ್ಕೆ ತರುವಂತೆ ನೀಡಿರುವ ಹೇಳಿಕೆಯನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಖಂಡಿಸಿದ್ದಾರೆ.
ಸನಾತನ ಹಿಂದೂ ಸಂಸ್ಕøತಿಯ ಮೇಲಿನ ಧ್ವೇಷ ಕಾಂಗ್ರೇಸ್ ನಲ್ಲಿ ಆಳವಾಗಿ ಬೇರೂರಿದೆ. ಅದರನ್ನು ಅವರು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಟ್ವೀಟ್ ಮಾಡಿದ್ದಾರೆ.
ಹಸಿವಿನಿಂದ ಹಲವರು ಸಾಯುತ್ತಿದ್ದಾರೆ. ಹಲವರಿಗೆ ಉದ್ಯೋಗ ಲಭಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಾವಿರಾರು ರೂ ಖರ್ಚು ಮಾಡಿ ಕಾಂಪಿಟೇಶನ್ ನಲ್ಲಿ ನೀರಲ್ಲಿ ಡುಬ್ಕಿ ಹೊಡೆಯುತ್ತಿದ್ದಾರೆ. ಎಲ್ಲಿಯ ವರೆಗೆ ಟಿವಿಯಲ್ಲಿ ಸರಿಯಾಗಿ ಬರುವುದಿಲ್ಲವೋ ಅಲ್ಲಿಯ ವರೆಗೂ ಡುಬ್ಕಿ ಹೊಡೆಯುತ್ತಲೇ ಇರುತ್ತಾರೆ ಎಂದು ಕುಂಭ ಮೇಳಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.