ಸುದ್ಧಿಕನ್ನಡ ವಾರ್ತೆ
Goa : ಮಕ್ಕಳಿಗೆ ಧರ್ಮ ಮತ್ತು ರೀತಿ ರಿವಾಜಿನ ಅನುಸಾರ ಸಂಸ್ಕಾರ ನೀಡುವುದು ಸಮಾಜದ ದೀರ್ಘಕಾಲದ ಹಿತವಾಗಿದೆ ಎಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ನುಡಿದರು.
ಗೋವಾ ರಾಜಧಾನಿ ಸಮೀಪದ ಪರ್ವರಿಯ ಜೀವೋತ್ತಮ ಮಠದಲ್ಲಿ ಕಳೆದ ವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪರ್ತಗಾಳಿ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಜರುಗಿತು. ಭಾನುವಾರ ಜೀವೋತ್ತಮ ಮಠದಲ್ಲಿ 251 ಕಲಶಗಳ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಗೋಮಂತಕೀಯರು ಪರದೇಶದಲ್ಲಿ,ಪರರಾಜ್ಯಗಳಲ್ಲಿ ವಾಸ್ತವ್ಯ ಹೂಡಿದ್ದರೂ ಕೂಡ ಅವರು ಮಾತೃಭೂಮಿ ಮತ್ತು ಸಮಾಜದೊಂದಿಗೆ ಸದಾ ಸಂಪರ್ಕ ಹೊಂದಿರಬೇಕು ಎಂದು ಪರ್ತಗಾಳಿ ಮಠದ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ನುಡಿದರು.
ಈ ಸಂದರ್ಭದಲ್ಲಿ ಗೋವಾ ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ, ಶಾಸಕ ದಿಗಂಬರ್ ಕಾಮತ್ರ, ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು, ಶಾಖಾ ಮಠದ ಅಧ್ಯಕ್ಷ ರಾಜನ್ ಕುಂಕಳಯೇಕರ್ ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.