ಸುದ್ಧಿಕನ್ನಡ ವಾರ್ತೆ
Goa : ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮಮಠದ ಪರಮ ಪೂಜ್ಯ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ 17 ನೇಯ ವಾರ್ಷಿಕ 251 ಕಲಶಗಳ ಶ್ರೀ ಶ್ರೀ ಸತ್ಯನಾರಾಯಣ ಮಹಾ ಪೂಜೆ ಜನವರಿ 26 ರಂದು ಭಾನುವಾರ ಪರ್ವರಿಯ ಜೀವೋತ್ತಮ ಮಠದಲ್ಲಿ ಜರುಗಿತು.

ಭಾನುವಾರ ಬೆಳಿಗ್ಗೆ 6.30 ರಿಂದ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾನ್ಹ ಮತ್ತು ರಾತ್ರಿ ಸಂಸ್ಥಾನದ ಪೂಜೆ, ಶ್ರೀ ಸತ್ಯನಾರಾಯಣನಿಗೆ ಮಂಗಳಾರತಿ, ಅನ್ನಸಂತರ್ಪಣೆ, ಶ್ರೀಗಳ ಪಾದ ಪೂಜೆ, ಪರ್ತಗಾಳಿ ಮಠದ ಶ್ರೀಗಳಿಂದ ಆಸೀರ್ವಚನ ಕಾರ್ಯಕ್ರಮ ಜರುಗಿತು.
ಗೋವಾದ ವಿವಿದೆಡೆಯಿಂದ ಜಿಎಸ್ ಬಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.