ಸುದ್ಧಿಕನ್ನಡ ವಾರ್ತೆ
Goa : ಗೋವಾದ ಕವಳೆ ಮಠದ  (Kavale Math)ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಮತ್ತು ಇತರ ಇಬ್ಬರ ವಿರುದ್ಧ ಅಕ್ರಮ ಭೂ ವ್ಯವಹಾರ ಆರೋಪದ ಪ್ರಕರಣದಲ್ಲಿ ಪೊಂಡಾ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸುದ್ಧಿಗೆ ಸಂಬಂಧಿಸಿದತೆ ಮಠದ ಅನುಯಾಯಿ ಡಾ.ಸಚಿನ್ ಮಂತ್ರಿ ಹಾಗೂ ಕವಳೆ ಮಠ ಟ್ರಸ್ಟ ವಕೀಲರಾದ ಮಂದಾ ಲೋಕೆ ರವರು ಪಣಜಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಕವಳೆ ಮಠದ ಆಸ್ತಿಗೆ ಸಂಬಂಧಿಸಿದಂತೆ 2018 ರಲ್ಲಿ ಸಹಿ ಹಾಕಲಾದ ಮಾರಾಟ ಒಪ್ಪಂದಕ್ಕೆ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಸಹಿ ಹಾಕಿದ್ದಾರೆ. ಆದರೆ ಟೈಪೋಗ್ರಾಫಿಕಲ್ ದೋಷದಿಂದಾಗಿ ಅವರ ಹೆಸರಿನ ಬದಲಿಗೆ ಹಿಂದಿನ ಗುರುಗಳ ಹೆಸರು ಬಂದಿದೆ. ಆ ಕಾರಣಕ್ಕಾಗಿ ಪೊಂಡಾ ಸಿವಿಲ್ ಕೋರ್ಟನಿಂದ ಡಿಕ್ರಿಯೊಂದಿಗೆ ಮಾರಾಟದ ಒಪ್ಪಂದವನ್ನು ರದ್ಧುಗೊಳಿಸಲಾಗಿದೆ ಎಂದು ಡಾ ಸಚಿನ್ ಮಂತ್ರಿ ಹೇಳಿದರು. ಆದರೆ ಹಳೇಯ ಟ್ರಸ್ಟಿಯೋರ್ವರು ದಾವೆ ಹೂಡಿದ್ದರಿಂದ ಹಿಂದೆ ಸರಿಯಬೇಕಾಯಿತು ಎಂದರು.

ಕವಳೆ ಮಠದ ಎಲ್ಲಾ ಹಕ್ಕುಗಳು ಸ್ವಾಮೀಜಿಯವರ ಬಳಿಯಿದೆ. ಏಕೆಂದರೆ ಮಠದ ಬಗ್ಗೆ ಸುದ್ಧಿ ಹಿಂಬಾಲಕರಲ್ಲಿ ಯಾವುದೇ ತಪ್ಪು ತಿಳುವಳಿಕೆ ಉಂಟಾಗದಿರಲು ಈ ಸುದ್ಧಿಗೋಷ್ಠಿ ನಡೆಸಲಾಗಿದೆ. ಶ್ರೀ ದೇವಿ ಶಾಂತಾದುರ್ಗಾ ಮತ್ತು ಮಂಗೇಶ ದೇವಸ್ಥಾನಗಳಿಗೆ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ವಿರುದ್ಧ ದೂರು ದಾಖಲಿಸುವ ಮೂಲಕ ಕೆಲವರು ಪ್ರಚಾರ ಗಿಟ್ಟಿಸಿಕೊಂಡಿರಬಹುದು ಎಂದು ವಕೀಲರಾದ ಮಂದಾ ಲೋಕೆ ಅಭಿಪ್ರಾಯಪಟ್ಟರು.

ಕವಳೆ ಮಠದ ಸ್ವಾಮೀಜಿಯವರ ವಿರುದ್ಧ ಪೋಲಿಸ್ ದೂರು ದಾಖಲಾಗಿದ್ದರಿಂದ ಭಕ್ತಾದಿಗಳು ಬೇಸರಗೊಂಡಿದ್ದಾರೆ ಎಂದು ಸಚಿನ್ ಮಂತ್ರಿ ಹಾಗೂ ಮಂದಾ ಲೋಕೆ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಆದರೆ ಮಠಕ್ಕೆ ಪೋಲಿಸರಿಂದ ಯಾವುದೇ ಸೂಚನೆ ಮಂದಿಲ್ಲ ಎಂದರು.