ಸುದ್ಧಿಕನ್ನಡ ವಾರ್ತೆ
Goa : ಗೋವಾದಲ್ಲಿ ಬೆಚ್ಚಿಬೀಳಿಸುವ ಕುಕೃತ್ಯವೊಂದು ನಡೆದಿದೆ. ಗೋವಾ ಮಡಗಾಂವ ಫಟೊರ್ಡಾದಲ್ಲಿ ಬಾಲಕಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಭೀಕರ ಘಟನೆ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರ ರಾಜ್ಯದ 5 ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಗೋವಾದ ಮಡಗಾಂವ ಫಟೊರ್ಡಾದಿಂದ ಬಾಲಕಿಯನ್ನು ಅಪಹರಣ ಮಾಡಿ ವೆರ್ಣಾದಲ್ಲಿ ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಅಲಿ ಮುಲ್ಲಾ (22), ಮೊಹಮ್ಮದ್ ಶೇಕ್ (18), ವೀರೇಶ ಅಗುಂದಾ (18), ಮಹಮ್ಮದ್ ಶೇಖ್ (18) ಈ ನಾಲ್ವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಮಾನಸಿಕ ಅಸ್ವಸ್ಥೆ…!
ಈ ಬಾಲಕಿಯು ಮಾನಸಿಕ ಅಸ್ವಸ್ಥೆ ಎನ್ನಲಾಗಿದ್ದುಈಕೆಯನ್ನು ಕಸಾವಲಿಮ್ ಪ್ಲ್ಯಾಟ್ ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ವೆಸಗಲಾಗಿದೆ.