ಸುದ್ಧಿಕನ್ನಡ ವಾರ್ತೆ
Goa : ಗೋವಾದ ಕವಳೆ ಮಠದ ಸ್ವಾಮೀಜಿಗಳು ಮತ್ತು ಇಬ್ಬರ ವಿರುದ್ಧ ಪೋಲಿಸ್ ದೂರಿನಲ್ಲಿ ಉಲ್ಲೇಖಿಸಿರುವಂತೆ ಜಮೀನು ಮಾರಾಟ ಪತ್ರವನ್ನು ಅಮಾನ್ಯವೆಂದು ಘೋಷಿಸಿ ಮಠದಿಂದ ಜಮೀನು ಖರೀದಿದಾರರಿಗೆ ಹಿಂದಿರುಗಿಸಿರುವುದರಿಂದ ನಕಲಿ ದಾಖಲೆಗಳ ಆರೋಪ ಉಧ್ಭವಿಸುವುದಿಲ್ಲ  ( Allegations of forged documents do not arise) ಎಂದು ಕವಳೆ ಮಠದ ವಕೀಲ ಮನೋಹರ್ ಅಡಪೈಕರ್ ಮಾಹಿತಿ ನೀಡಿದ್ದಾರೆ.

 

ಗೋವಾಎದ ಕವಳೆ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ ಹಾಗೂ ಇನ್ನಿಬ್ಬರ ವಿರುದ್ಧ ಪೋಂಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಅವರ ಶಿಷ್ಯವೃಂದ ಹಾಗೂ ಅನುಯಾಯಿಗಳಲ್ಲಿ ಆತಂಕ ಮನೆ ಮಾಡಿತ್ತು. ಗೋವಾದ ಪೊಂಡಾ ತಾಲೂಕಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ವಂಚನೆಯ ಮೂಲಕ ಆಸ್ತಿಯನ್ನು ಮಾರಾಟ ಮಾಡಿದ ಆರೋಪದ ಮೇಲೆ ಪೊಂಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಸ್ತಿ ಖರೀದಿದಾರರಿಂದ ಈಗಾಗಲೇ ಆಸ್ತಿಯನ್ನು ಹಿಂಪಡೆಯಲಾಗಿದೆ. (The property has already been repossessed by the property buyer) ಮಠ ಸಮೀತಿಯ ಚುನಾವಣೆ ಸಮೀಪಿಸುತ್ತಿರುವುದರಿಂದ ಕೆಲವರು ಈ ವಿಷಯವನ್ನು ದೊಡ್ಡದಾಗಿ ಪ್ರಚಾರ ಮಾಡಲು ಬಯಸುತ್ತಿದ್ದಾರೆ ಎಂದು ಶ್ರೀಮಠದ ವಕೀಲ ಮನೋಹರ್ ಅಡಪೈಕರ್ ಹೇಳಿಕೆ ನೀಡಿದ್ದಾರೆ.