ಸುದ್ಧಿಕನ್ನಡ ವಾರ್ತೆ
Goa : ಗೋವಾಎದ ಕವಳೆ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ ಹಾಗೂ ಇನ್ನಿಬ್ಬರ ವಿರುದ್ಧ ಪೋಂಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಅವರ ಶಿಷ್ಯವೃಂದ ಹಾಗೂ ಅನುಯಾಯಿಗಳಲ್ಲಿ ಆತಂಕ ಮನೆ ಮಾಡಿದೆ. ಈ ಮಠದ ಶಿಷ್ಯರು ಕರ್ನಾಟಕ ಸೇರಿದಂತೆ ಮುಂಬಯಿಯಲ್ಲಿಯೂ ಹೆಚ್ಚಿನ ಸಣಖ್ಯೆಯಲ್ಲಿದ್ದಾರೆ.
ಪೊಂಡಾ ತಾಲೂಕಿನಲ್ಲಿರುವ ಶ್ರೀಮಠದ ಜಮೀನು ಮಾರಾಟ ಮಾಡುವಾಗ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಸ್ವರ್ಗವಾಸಿಗಳಾಗಿರುವ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಸಹಿ ಮಾಡಿರುವ ಗಂಭೀರ ಆರೋಪವನ್ನು ಮಠದ ಪ್ರತಿಷ್ಠಿತ ಅನುಯಾಯಿಗಳು ಮಾಡಿದ್ದಾರೆ ಎನ್ನಲಾಗಿದೆ.
ನಕಲಿ ಪವರ್ ಆಫ್ ಅಟೊರ್ನಿ ಮೂಲಕ ಉಚ್ಛ ನ್ಯಾಯಾಲಯ ಹೊರಡಿಸಿದ್ದ ನಿಯಮಗಳನ್ನು ಭಂಗ ಮಾಡಲಾಗಿದೆ ಎಂಬ ಗಂಭೀರ ಆರೋಪವಿದೆ.
ಅಕ್ರಮವಾಗಿ ಜಮೀನು ವ್ಯವಹಾರ ನಡೆಸಿರುವ ಗಂಭೀರ ಆರೋಪ ಕೂಡ ಶ್ರೀಗಳ ಮೇಲೆ ಇದೆ ಎನ್ನಲಾಗಿದೆ. ಮಠದಿಂದ ಕೆಲ ಕಾಗದಪತ್ರಗಳನ್ನು ಕೇಳಲಾಗಿದ್ದು ಈ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಪೋಲಿಸ್ ಅಧೀಕ್ಷಕ ಸುನೀಲ್ ಸಾವಂತ್ ಮಾಹಿತಿ ನೀಡಿದ್ದಾರೆ.
ಶ್ರೀಮಠದ ಸ್ವಾಮೀಜಿ, ಅವಧೂತ ಶ್ರೀರಾಮ ಕಾಕೋಡಕರ್ ಮತ್ತು ನೋಟರಿ ಮನೋಹರ್ ಅಡಪಯಿಕರ್ ರವರ ವಿರುದ್ಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.