ಸುದ್ದಿ ಕನ್ನಡ ವಾರ್ತೆ

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಪ್ಯಾರಾಗ್ಲೈಂಡಿಂಗ್ ನ್ನು ಮುಂದಿನ ಆದೇಶದ ವರೆಗೆ ಗೋವಾ ರಾಜ್ಯ ಪ್ರವಾಸೋದ್ಯಮ ಇಲಾಖೆ ಸ್ಥಗಿತಗೊಳಿಸಿದೆ.
ಕಳೆದ ವಾರ ಗೋವಾದ ಕೆರಿ ಕರಾವಳಿಯಲ್ಲಿ ಪ್ಯಾರಾಗ್ಲೈಡಿಂಗ್ ಆನಂದಿಸುತ್ತಿದ್ದ ಪ್ಯಾರಾಗ್ಲೈಡಿಂಗ್ ಆಪರೇಟರ್ ಮತ್ತು ಯುವ ಪ್ರವಾಸಿಯೊಬ್ಬರು ಬಿದ್ದು ಸಾವನ್ನಪ್ಪಿದ ಭೀಕರ ಘಟನೆ ನಡೆದಿತ್ತು. ಪ್ಯಾರಾಗ್ಲೈಡಿಂಗ್ ನಡೆಸುತ್ತಿದ್ದಾಗ, ಪ್ಯಾರಾಗ್ಲೈಡಿಂಗ್ ಹಗ್ಗದ ಒಂದು ಭಾಗ ತುಂಡಾಗಿ ಇಬ್ಬರೂ ಪರ್ವತದ ಮೇಲೆ ಬಿದ್ದು ಸಾವನ್ನಪ್ಪಿದ್ದರು.

ಈ ಭೀಕರ ಘಟನೆಯ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಎಚ್ಚೆತ್ತುಕೊಂಡಿದ್ದು, ಗೋವಾಕ್ಕೆ ಬರುವ ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಮುಂದಿನ ಆದೇಶದ ವರೆಗೆ ಗೋವಾದಲ್ಲಿ ಪ್ಯಾರಾಗ್ಲೈಂಡಿನ್ ಚಟುವಟಿಕೆಯನ್ನು ಪ್ರವಾಸೋದ್ಯಮ ಇಲಾಖೆ ರದ್ಧುಗೊಳಿಸಿದೆ.