ಸುದ್ಧಿಕನ್ನಡ ವಾರ್ತೆ
Goa Bambolim: ಗೋವಾ ಮೆಡಿಕಲ್ ಕಾಲೇಜು ಬಾಂಬೋಲಿಂ ಆಸ್ಪತ್ರೆಯಲ್ಲಿ ಶನಿವಾರ ರೋಗಿಗಳ ಜಾತ್ರೆಯೇ ಕಂಡುಬಂದಿದೆ. ಸರ್ವರ್ ಡೌನ್ ಆದ ಹಿನ್ನೆಲೆಯಲ್ಲಿ ಆನ್ ಲೈನ್ ನೋಂದಣಿ ಸ್ಥಗಿತಗೊಂಡಿದ್ದರಿಂದ ಆಪ್ ವಲೈನ್ ಲೋಂದಣಿಗಾಗಿ ರೋಗಿಗಳು ಒಪಿಡಿಯಲ್ಲಿ ಮುಗಿಬಿದ್ಧ ಘಟನೆ ನಡೆದಿದೆ.
ಗೋವಾದ ಪ್ರಸಿದ್ಧ ಬಾಂಬೋಲಿಂ ಆಸ್ಪತ್ರೆಗೆ ಗೋವಾ ರಾಜ್ಯದ ಮಾತ್ರವಲ್ಲದೆಯೇ ನೆರೆಯ ರಾಜ್ಯಗಳಿಂದಲೂ ಚಿಕಿತ್ಸೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಾರೆ. ಶನಿವಾರ ಬೆಳಿಗ್ಗೆ ಇದ್ದಕ್ಕಿದ್ದಂತೆಯೇ ಸರ್ವರ್ ಡೌನ್ ಆದ ಕಾರಣ ಒಪಿಡಿಗಾಗಿ ಆನ್ ಲೈನ್ ನೋಂದಣಿ ಸ್ಥಗಿತಗೊಂಡಿದ್ದರಿಂದ ಆಫ್ ಲೈನ್ ನೋಂದಣಿಗಾಗಿ ರೋಗಿಗಳು ಆಸ್ಪತ್ರೆಯ ಕೌಂಟರ್ ನಲ್ಲಿ ಮುಗಿಬಿದ್ಧ ಘಟನೆ ಶನಿವಾರ ನಡೆದಿದೆ.