ಸುದ್ಧಿಕನ್ನಡ ವಾರ್ತೆ
Goa : ಗೋವಾ ರಾಜ್ಯ ಬಿಜೆಪಿ ಪ್ರದೇಶಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು, ದಾಮು ನಾಯ್ಕ ರವರು ನಾಮಪತ್ರ ಸಲ್ಲಿಸಿದ್ದುಮ ಏಕೈಕ ನಾಮಪತ್ರ ಸಲ್ಲಿಕೆಯಾಗಿದೆ. ಇದರಿದಾಗಿ ದಾಮು ನಾಯ್ಕ ರವರು ನಿಜೆಪಿ ಪ್ರದೇಶಾಧ್ಯಕ್ಷರಾಗಿ ಅಧೀಕೃತವಾಗಿ ಘೋಷಣೆಯಾಗುವುದೊಂದೇ ಬಾಕಿ ಉಳಿದಿದೆ. ಜನವರಿ 18 ರಂದು ನೂತನ ಪ್ರದೇಶಾಧ್ಯಕ್ಷರಾಗಿ ದಾಮು ನಾಯ್ಕ ಅಧೀಕೃತವಾಗಿ ಘೋಷಣೆಯಾಗುವುದು ಖಚಿತವಾದಂತಾಗಿದೆ.
ದಾಮು ನಾಯ್ಕ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ , ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ಸಾಲ್, ಕೇಂದ್ರ ಸಚಿವ ಶ್ರೀಪಾದ ನಾಯ್ಕ , ಹಾಲಿ ಅಧ್ಯಕ್ಷ ಸದಾನಂದ ತಾನಾವಡೆ ಸೇರಿದಂತೆ ಬಿಜೆಪಿ ರಾಜ್ಯ ನಾಯಕರು ಉಪಸ್ಥಿತರಿದ್ದರು.