ಸುದ್ಧಿಕನ್ನಡ ವಾರ್ತೆ
Goa (ಮಡಗಾಂವ): ಗೋವಾ ಕನ್ನಡ ಸಂಘ (ರಿ) ಮಡಗಾಂವ ವಜ್ರ ಮಹೋತ್ಸವ ಸಮಾರೋಪ ಸಮಾರಂಭ ಫೆಬ್ರುವರಿ 1 ರಂದು ಶನಿವಾರ ಸಂಜೆ 4 ಗಂಟೆಗೆ ಮಡಗಾಂವ ರವೀಂದ್ರ ಭವನದ ಕಾನ್ಫರೆನ್ಸ ಹಾಲ್ ನಲ್ಲಿ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಶಿರಸಿಯ ವೇದ ಆರೋಗ್ಯ ಕೇಂದ್ರ ನಿಸರ್ಗಮನೆಯ ಡಾ. ವೆಂಕಟ್ರಮಣ ಹೆಗಡೆ , ಗೌರವ ಅತಿಥಿಗಳಾಗಿ ಗೋವಾ ಮಡಗಾಂವ ಲೇಖಕರು ಆಧ್ಯಾತ್ಮಿಕ ಚಿಂತಕರೂ ಆದ ಅಶ್ವಿನಿ ಅಶೋಕ ಕುಲಕರ್ಣಿ ಆಗಮಿಸಲಿದ್ದಾರೆ.
ಗೋವಾ ಕನ್ನಡ ಸಂಘದ ಸಂಸ್ಥಾಪಕ ಕಾರ್ಯದರ್ಶಿಗಳಾದ ಶಾ.ಮಂ ಕೃಷ್ಣರಾವ್ ರವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಗೋವಾ ಕನ್ನಡ ಸಂಘ ಮಡಗಾಂವನ ಮಾಜಿ ಅಧ್ಯಕ್ಷರುಗಳಿಗೆ, ಕಾರ್ಯಕಾರಿ ಸಮೀತಿಯ ಸಕ್ರೀಯ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಸಭಾ ಕಾರ್ಯಕ್ರಮದ ನಂತರ ಕದಂಬ ಮ್ಯೂಜಿಕ್ ಸ್ಟುಡಿಯೊ ಶಿರಸಿ ತಂಡದವರಿಂದ ಸುಮಧುರ ಚಲನಚಿತ್ರ ಗೀತೆ,ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ. ಉಮಾಕಾಂತ ಗೌಡ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಬೆಂಗಳೂರಿನ ಜೂನಿಯರ್ ಶಂಕರನಾಗ್ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದಾರೆ. ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಲಿದೆ. ಶ್ರೀಮತಿ ಉಷಾ ಮಲ್ಲಿಕಾರ್ಜುನಪ್ಪ ಮಡಗಾಂವ ರವರು ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದಾರೆ.
ಈ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಗೋವಾ ಕನ್ನಡ ಸಂಘದ ಅಧ್ಯಕ್ಷ ಕೆ.ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಮೋಹನ್ ಎ.ಕಾಂಬಳೆ, ಖಜಾಂಚಿ ಕೃಷ್ಣಾ ಹ.ಬಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.