ಸುದ್ಧಿಕನ್ನಡ ವಾರ್ತೆ
Goa Mapusa: ಗೋವಾದ ಮಾಪ್ಸಾದ ಪ್ರಸಿದ್ಧ ಜಾಗೃತ ದೇವ ಬೋಡಗೇಶ್ವರ ದೇವಸ್ಥಾನದ 90 ನೇಯ ವರ್ಷದ ವಾರ್ಷಿಕೋತ್ಸವವು ಜನವರಿ 12 ರಂದು ಆರಂಭಗೊಂಡಿದ್ದು ಜನವರಿ 19 ರ ವರೆಗೆ ಒಂದು ವಾರದವರೆಗೆ ನಡೆಯಲಿದೆ.
ಜಾತ್ರೋತ್ಸವವು ಭಾನುವಾರ ದೇವಸ್ಥಾನ ಸಮೀತಿಯ ಅಧ್ಯಕ್ಷ ಆನಂದ ಬೈಡಕರ್ ದಂಪತಿಗಳು ದೇವ ಬೋಡಗೇಶ್ವರ ರವರ ಚರಣಗಳಲ್ಲಿ ಫಲತಾಂಬೂಲ ಸಮರ್ಪಿಸುವುದರ ಮೂಲಕ ಈ ಪ್ರಸಿದ್ಧ ಜಾತ್ರೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ಬೋಡಗೇಶ್ವರ ಜಾತ್ರೋತ್ಸವದಲ್ಲಿ ಪ್ರತಿದಿನ ಶ್ರೀ ಸತ್ಯನಾರಾಯಣ ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ ಸಂಗೀತ ಕಾರ್ಯಕ್ರಮ ಮತ್ತು ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಾಪ್ಸಾದ ಶ್ರೀ ಬೋಡಗೇಶ್ವರ ಜಾತ್ರೋತ್ಸವದ ಅಂಗವಾಗಿ ಗೋವಾ ರಾಜ್ಯದ ಮೂಲೆ ಮೂಲೆಯಿಂದ ಮಾತ್ರವಲ್ಲದೆಯೇ ನೆರೆಯ ರಾಜ್ಯಗಳಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
650 ಅಂಗಡಿಗಳು…!
ಗೋವಾದ ಪ್ರಸಿದ್ಧ ಜಾತ್ರೋತ್ಸವ ಇದಾಗಿದ್ದು ದೇವಸ್ಥಾನದ ಮುಂಭಾಗದಲ್ಲಿ ಸುಮಾರು 650 ಅಂಗಡಿಗಳನ್ನು ಹಾಕಲಾಗಿದೆ. ಇಷ್ಟೇ ಅಲ್ಲದೆಯೇ ಜೊಯಿಂಟ್ ವಿಲ್ ನಂತಹ ವಿವಿಧ ಆಟಗಳು ಜಾತ್ರೆಯ ಆಕರ್ಷಣೆಯ ಕೇಂದ್ರಬಿಂದುವಾಗಿದೆ.