ಸುದ್ಧಿಕನ್ನಡ ವಾರ್ತೆ
Goa : ಗೋವಾ ರಾಜ್ಯದ ಅಭಿವೃದ್ಧಿ ನಿಧಿಯ ಕಂತು 667.91 ಕೋಟಿ ರೂವನ್ನು ಕೇಂದ್ರ ಮೋದಿ ಸರ್ಕಾರ ಗೋವಾ ರಾಜ್ಯಕ್ಕೆ ಮಂಜೂರು ಮಾಡಿದೆ. ಇಷ್ಟೇ ಅಲ್ಲದೆಯೇ ಗೋವಾ ರಾಜ್ಯ ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳಿಗೆ 1,73,030 ಕೋಟಿ ರೂ ಹಣವನ್ನು ಸಹ ಮಂಜೂರು ಮಾಡಿದೆ.

ಗೋವಾದಲ್ಲಿ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳಿಗಾಗಿ 32 ಸಾವಿರ ಕೋಟಿ ರೂ ಅನುದಾನ ನೀಡುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೇತೃತ್ವದ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಈ ಕುರಿತಂತೆ 16 ನೇಯ ವಿತ್ತ ಆಯೋಗವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಗೋವಾ ಸರ್ಕಾರ ಮನವಿ ಮಾಡಿದೆ.