ಸುದ್ದಿಕನ್ನಡ ವಾರ್ತೆ
Goa: ಗೋವಾದ ಅರ್ಚಕರು ಲೂಟಿಕೋರರು ಎಂದು ಹೇಳಿಕೆ ನೀಡಿದ್ದ ಕೊಂಕಣಿ ಲೇಖಕ ಹಾಗೂ ಸಾಹಿತ್ಯ ಅಕಾಡಮಿ ಪುರಸ್ಕøತ ಸಾಹಿತಿ ದತ್ತ ದಾಮೋದರ್ ನಾಯ್ಕ ವಿರುದ್ಧ ಕಾಣಕೋಣ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಈ ಹೇಳಿಕೆಯು ಗೋವಾದ ಧಾರ್ಮಿಕ ವಲಯದಲ್ಲಿ ವಿವಾದಕ್ಕೆ ಆಹೂ ತೀವ್ರ ಆಕ್ಷೇಪಕ್ಕೂ ಕಾರಣವಾಗಿದೆ.

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಅಡುಯಲ್ಲಿ ಪ್ರಕರಣ ದಾಖಲಾಗಿದೆ. ದೇವಾಲಯದ ಅರ್ಛಕರು ಮತ್ತು ಮಠಗಳಿಗೆ ಸಂಬಂಧಿಸಿದಂತೆ ನಾಯಕ್ ರವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕಾಣಕೋಣ ನಿವಾಸಿ ಸತೀಶ್ ಭಟ್ ರವರು ನೀಡಿದ ದೂರಿನ ಮೇಲೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಹುಮುಖ್ಯವಾಗಿ ಗೋವಾದ ಕಾಣಕೋಣದಲ್ಲಿರುವ ಗೌಡಸಾರಸ್ವತ ಸಮಾಜದ ಬ್ರಾಹ್ಮಣ ಸಮುದಾಯದ ಪ್ರಮುಖ ಮಠ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಸಂಬಂಧಿಸಿದಂತೆ ಅವರು ನೀಡಿದ್ದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಸ್ಥಳೀಯ ಸುದ್ಧಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಾಯಕ್ ರವರು- ದೇವರು ಮತ್ತು ಧರ್ಮಕ್ಕೆ ನಾನು ಒಂದು ಪೈಸೆ ಕೂಡಾ ನೀಡುವುದಿಲ್ಲ . ದೇಗುಲಗಳು ಹಣವನ್ನು ಲೂಟಿ ಮಾಡುತ್ತವೆ. ಅರ್ಚಕರು, ಪರ್ತಗಾಳಿ ಮಠ , ಈ ದೇವಾಲಯಗಳು ನನ್ನನ್ನು ಲೂಟಿ ಮಾಡುವ ಸಾಧ್ಯತೆಯಿತ್ತು ಎಂದು ಅವರು ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.