ಸುದ್ಧಿಕನ್ನಡ ವಾರ್ತೆ
Goa: ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಭಾರಿ ಅನಾಹುತವೊಂದು ಸಂಭವಿಸಿದೆ. ರಾತ್ರಿ 10 ಗಂಟೆಯ ನಂತರ ಫಾಯರ್ ವರ್ಕ ನಡೆಸಲು ನಿರ್ಬಂಧವಿದ್ದರೂ ಕೂಡ ಡಿಸೆಂಬರ್ 31 ರಂದು ರಾತ್ರಿ ಗೋವಾದ ಮಾಂದ್ರೆ ಬೀಚ್ ನಲ್ಲಿ ಬೃಹತ್ ಪ್ರಮಾಣದಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಫಾಯರ್ ವರ್ಕ ನಡೆಸಲಾಯಿತು. ಈ ಫಾಯರ್ ವರ್ಕನಿಂದ ಮಾಂದ್ರೆಯಲ್ಲಿ ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದರಲ್ಲಿ ಪರಿಸರ ಪ್ರೇಮಿಗಳು ನೆಟ್ಟಿದ್ದ 5000 ಗಿಡಗಳ ಪೈಕಿ 3000 ಕ್ಕೂ ಹೆಚ್ಚು ಮರಗಿಡಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

ಇಷ್ಟೇ ಅಲ್ಲದೆಯೇ ಈ ಭಾಗದಲ್ಲಿದ್ದ ಅಪಾರ ಪ್ರಮಾಣದ ಗೇರು ಬೆಳೆಗೆ ಕೂಡ ನಷ್ಠವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.