ಸುದ್ಧಿಕನ್ನಡ ವಾರ್ತೆ
Goa : ದೇಶ-ವಿದೇಶಗಳಿಂದ ಗೋವಾಕ್ಕೆ ಆಗಮಿಸಿದ್ದ ಪ್ರವಾಸಿಗರು ಗೋವಾದ ಸಮುದ್ರ ತೀರದಲ್ಲಿ ನೈಟ್ ಲೈಫ್ ನಲ್ಲಿ ಹಾಗೂ ಮನೋರಂಜನಾತ್ಮಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ಹೊಸ ವರ್ಷಕ್ಕೆ ಸ್ವಾಗತ ಕೋರಿದರು.(New Year Celebration)

ಕರೋನಾ ನಂತರ ಮೊದಲ ಬಾರಿಗೆ ಗೋವಾದಲ್ಲಿ ಪ್ರಸಕ್ತ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದಿದ್ದಾರೆ. ತ್ರಿ ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್ ಗಳು ಸಂಪೂರ್ಣವಾಗಿ ಭರ್ತಿಯಾಗಿತ್ತು. ಹೋಂ ಸ್ಟೇ ಮತ್ತು ಗೆಸ್ಟ ಹೌಸ್ ನಲ್ಲಿ ಕೂಡ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಡಿಸೆಂಬರ್ 31 ರ ರಾತ್ರಿ ಸೂರ್ಯ ಮುಳುಗುತ್ತಿದ್ದಂತೆಯೇ ಕಿನಾರಿ ಭಾಗದಲ್ಲಿ ರಂಗಬಿರಂಗಿ ದೀಪಗಳನ್ನು ಹಚ್ಚಲಾಗಿತ್ತು. ಬೃಹತ್ ಮ್ಯೂಜಿಕ್ ಫೆಸ್ಟಿವಲ್, ಬೀಚ್ ಪಾರ್ಟಿ, ಸಾಂಸ್ಕøತಿಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಗೋವಾದ ಮೀರಾಮಾರ್, ಕಲಂಗುಟ್, ಬಾಗಾ, ಹಣಜುಣ, ಹರಮಲ್, ಸೇರಿದಂತೆ ಹಲವು ಬೀಚ್ ಗಳಲ್ಲಿ ಪ್ರವಾಸಿಗರ ಗರ್ದಿ ಕಂಡುಬಂತು. ಬಾರಿ ಸಂಖ್ಯೆಯಲ್ಲಿ ವಾಹನ ಓಡಾಟ ಇರುವುದರಿಂದ ಹಲವೆಡೆ ವಾಹನ ದಟ್ಟಣೆ ಕಂಡುಬಂತು.