ಸುದ್ಧಿಕನ್ನಡ ವಾರ್ತೆ
ಪಣಜಿ ಸ್ಮಾರ್ಟ ಸಿಟಿ ಯೋಜನೆಯ ಕಾಮಗಾರಿ ತಲೆ ನೋವಾಗಿದ್ದರೂ ಕೂಡ ಪಣಜಿ ನಿವಾಸಿಗಳಿಗೆ ಸ್ಮಾರ್ಟ ಬಸ್ ಗಳು ನಿಜಕ್ಕೂ ಸಂತಸವಾದ ಪಯಣವನ್ನು ತಂದುಕೊಟ್ಟಿದೆ. ಪಣಜಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕೇವಲ 20 ರೂಗಳಲ್ಲಿ ಹವಾನಿಯಂತ್ರಿತ ಸ್ಮಾರ್ಟ ಬಸ್ ಮೂಲಕ ಪ್ರಯಾಣಿಸಬಹುದಾಗಿದೆ.
ಕದಂಬ ಕಾರ್ಪೊರೇಶನ್ ಲಿಮಿಟೆಡ್ ಅಡಿಯಲ್ಲಿ ಈ ಸ್ಮಾರ್ಟ ಬಸ್ ಸೇವೆಯು ಜುಲೈ ತಿಂಗಳಲ್ಲಿ ಪಣಜಿಯಲ್ಲಿ ಪ್ರಾರಂಭವಾಗಿದೆ. ಪ್ರಸ್ತುತ ಸುಮಾರು 15 ಸ್ಮಾರ್ಟ ಬಸ್ ಗಳು ಸ್ಮಾರ್ಟ ಸಿಟಿ ಸುತ್ತಮುತ್ತಲಿನ ಪ್ರದೇಶಗಳಿಗೆ ಓಡಾಟ ನಡೆಸುತ್ತಿದೆ. ಸ್ಮಾರ್ಟ ಸಿಟಿಯಲ್ಲಿ ಒಟ್ಟೂ 45 ಸ್ಮಾರ್ಟ ಬಸ್ ಗಳು ಓಡಾಟ ನಡೆಸುತ್ತಿದೆ. ಪ್ರತಿ 15 ರಿಂದ 20 ನಿಮಿಷಗಳಿಗೊಮ್ಮೆ ಈ ಬಸ್ ಗಳು ಪಣಜಿ ಬಸ್ ನಿಲ್ದಾಣದಿಂದ ನಿಗಧಿತ ಪ್ರದೇಶಗಳಿಗೆ ಓಡಾಟ ನಡೆಸುತ್ತವೆ. ಜುಲೈ ನಿಂದ ಸಪ್ಟೆಂಬರ್ ವರೆಗೆ 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ಬಸ್ ನಲ್ಲಿ ಪ್ರಯಾಣಿಸಿದ್ದಾರೆ.
ಪಣಜಿಯಲ್ಲಿ ಹಲವು ವರ್ಷಗಳಿಂದ ಖಾಸಗಿ ಬಸ್ ಸೇವೆ ಇದ್ದರೂ ಕೂಡ ನಗರದ ಒಳಭಾಗದಲ್ಲಿ ಈ ಸೇವೆ ಲಭ್ಯವಿರಲಿಲ್ಲ. ಆದರೆ ಪಣಜಿ ಸ್ಮಾರ್ಟ ಸಿಟಿ ಬಸ್ ಗಳು ಪ್ರಯಾಣಿಕರಿಗೆ ಸ್ಮಾರ್ಟ ಸಿಟಿಯ ಒಳಭಾಗದ ಪ್ರಯಾಣ ವ್ಯವಸ್ಥೆ ಕಲ್ಪಿಸುತ್ತಿದೆ ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚರಿನ ಅನುಕೂಲವಾಗಿದೆ.
ಪಣಜಿ ಸ್ಮಾರ್ಟ ಬಸ್ ಗಳು ಮೀರಾಮಾರ್-ಪಣಜಿ, ದೋನಾಪಾವುಲ್ -ಪಣಜಿ, ತಾಲಿಗಾಂವ- ಪಣಜಿ, ಬಾಂಬೋಲಿಂ ಸಾಂತಾಕ್ರೂಜ್ – ಪಣಜಿ, ಈ ಮಾರ್ಗಗಳಿಗೆ ಓಡಾಟ ನಡೆಸುತ್ತದೆ. ಆರಂಭದಲ್ಲಿ ಕೇವಲ 8 ಬಸ್ ಗಳಿದ್ದವು, ಇವುಗಳ ಸಂಖ್ಯೆ ಹೆಚ್ಚಿಸಲಾಗಿದೆ. ಸದ್ಯ ಸ್ಮಾರ್ಟ ಸಿಟಿಯಲ್ಲಿ 42 ಬಸ್ ಗಳು ಸಂಚರಿಸುತ್ತಿದ್ದು , ಶೀಘ್ರದಲ್ಲಿಯೇ ಇನ್ನಷ್ಟು ಬಸ್ ಗಳು ಸೇವೆಗೆ ಬರಲಿದೆ ಎನ್ನಲಾಗಿದೆ. ಸ್ಮಾರ್ಟ ಪಾಸ್ ಗಳನ್ನು ಕೂಡ ಆರಂಭಿಸಲಾಗಿದ್ದು, ಟಿಕೇಟ್ ನಲ್ಲಿ ಶೇಖಡಾ 10 ರಷ್ಟು ರಿಯಾಯತಿಯನ್ನು ಸಹ ನೀಡಲಾಗುತ್ತಿದೆ.