ಸುದ್ಧಿಕನ್ನಡ ವಾರ್ತೆ
Goa : ಗೋವಾದಲ್ಲಿ ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ಆಯೋಜಿಸಿದ್ದ ಸನ್ ಬರ್ನ ಎಲೆಕ್ಟ್ರಾನಿಕ್ ಡಾನ್ಸ ಫೆಸ್ಟಿವಲ್ ನಲ್ಲಿ ಮೂರ್ಛೆ ತಪ್ಪಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಕರಣ್ ಕಶ್ಯಪ್ ರವರ ದೇಹದಲ್ಲಿ ಮಾದಕ ಪದಾರ್ಥ ಕಂಡುಬಂದಿದೆ ಎಂದು ಗೋವಾ ವೈದ್ಯಕೀಯ ಮಹಾವಿದ್ಯಾಲಯ ವರದಿ ತಿಳಿಸಿದೆ. ಈತನ ದೇಹದಲ್ಲಿ ಮೆಥಾಂಪೆಟಮೈನ್ ಮತ್ತು ಅಂಪೆಟಮೈನ್ ಎಂಬ ಅಪಾಯಕಾರಿ ಔಷಧಿಗಳು ಪತ್ತೆಯಾಗಿದೆ.

ಕರಣ್ ಕಶ್ಯಪ್ ರವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿನ ಕಾರಣವನ್ನು ಕಾಯ್ದಿರಿಸಲಾಗಿದ್ದರೂ ಗೋವಾ ವೈದ್ಯಕೀಯ ಮಹಾವಿದ್ಯಾಲಯವು ನಡೆಸಿದ ಸ್ಟೇಟ್ ಆಪ್ ಅರ್ಟೆರಾಂಡಾಕ್ಸ ಅನಲೈಸರ್ ವರದಿಯಲ್ಲಿ ಇವರು ಮೃತಪಟ್ಟಿರುವುದನ್ನು ದೃಢಪಡಿಸಿದೆ. ಈತ ಡೃಗ್ಸ ಸೇವಿಸಿರುವುದು ಪತ್ತೆಯಾಗಿದೆ. ಕರಣ್ ಕಶ್ಯಪ್ ದೇಹದಲ್ಲಿ ರಾಸಾಯನಿಕಗಳು ಪತ್ತೆಯಾಗಿದೆ. ಈ ವರದಿಯನ್ನು ಗೋವಾ ವೈದ್ಯಕೀಯ ಮಹಾವಿದ್ಯಾಲಯದ ಪೊರೆನ್ಸಿಕ್ ವಿಭಾಗವು ಪಡ್ನೆ ಪೋಲಿಸರಿಗೆ ಮಂಗಳವಾರ ವರದಿ ನೀಡಿದೆ.