ಸುದ್ಧಿಕನ್ನಡ ವಾರ್ತೆ
Goa : ಹೊಸ ವರ್ಷ 2025 ರ ಸ್ವಾಗತಕ್ಕಾಗಿ  (Goa New Year Celebration) ದೇಶ-ವಿದೇಶಿಯ ಪ್ರವಾಸಿಗರು ಈಗಾಗಲೇ ಗೋವಾಕ್ಕೆ ಆಗಮಿಸಿದ್ದಾರೆ. ಹೊಸ ವರ್ಷ ಸ್ವಾಗತಕ್ಕೆ ಗೋವಾ ರಾಜಧಾನಿ ಪಣಜಿ ಸೇರಿದಂತೆ ಕಿನಾರಿ ಭಾಗದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಗೋವಾ ಪೋಲಿಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಈ ಕುರಿತಂತೆ ಪೋಲಿಸ್ ಇಲಾಖೆ ಗೋವಾಕ್ಕೆ ಆಗಮಿಸಿರುವ ಪ್ರವಾಸಿಗರಿಗೆ ಮಾರ್ಗಸೂಚಿ ಹೊರಡಿಸಿದೆ.

ಗೋವಾದಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಹೆಚ್ಚಿರುವ ಜನಜಂಗುಳಿ ಇಂತಹ ಘಟನೆಗಳು ನಡೆಯದಂತೆ ಪೋಲಿಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಗೋವಾದಲ್ಲಿ ದೇಶ-ವಿದೇಶಿಯ ಪ್ರವಾಸಿಗರು ಸುರಕ್ಷಿತ ಸಾರಿಗೆ ಸಂಚಾರಕ್ಕೆ ನಿಯಮಾವಳಿಗಳನ್ನು ಜಾರಿಗೊಳಿಸಿದೆ.

ಪೋಲಿಸ್ ಇಲಾಖೆ ಕಟ್ಟೆಚ್ಚರ…!

ಗೋವಾ ರಾಜಧಾನಿ ಪಣಜಿ, ಕಲಂಗುಟ್, ಬಾಗಾ, ಕಾಂದೋಳಿ, ಹಣಜುಣ, ಸೇರಿದಂತೆ ಹಲವು ಪ್ರಮುಖ ಬೀಚ್ ರಸ್ತೆಗಳಲ್ಲಿ ಡಿಸೆಂಬರ್ 31 ರ ರಾತ್ರಿ ಭಾರಿ ವಾಹನ ದಟ್ಟಣೆಯುಂಟಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ಹಲವು ನಿಯಮಾವಳಿಗಳನ್ನು ಜಾರಿಗೊಳಿಸಿ ಕಟ್ಟೆಚ್ಚರ ವಹಿಸಿದೆ.

 

ಅಶಿಸ್ತು ಪಾರ್ಕಿಂಗ್ ವಿರುದ್ಧ ಕ್ರಮ…..
ಪ್ರವಾಸಿಗರಿಗೆ ಪ್ರತಿಯೊಂದ ಪ್ರವಾಸಿ ತಾಣಗಳ ಬಳಿ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸುರಕ್ಷಿತ ಹಾಗೂ ವ್ಯವಸ್ಥಿತ ವಾಹನಗಳ ಓಡಾಟಕ್ಕೆ ಅನಧೀಕೃತ ಪಾರ್ಕಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೋಲಿಸ್ ಇಲಾಖೆ ಎಚ್ಚರಿಕೆ ನೀಡಿದೆ.

ಮಧ್ಯಪಾನ ಮಾಡಿ ವಾಹನ ಓಡಿಸಬೇಡಿ…
ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಧ್ಯಪಾನ ಮಾಡಿ ವಾಹನ ಓಡಿಬೇಡಿ ಎಂದು ಪೋಲಿಸ್ ಇಲಾಖೆ ಆದೇಶ ಹೊರಡಿಸಿದೆ. ಮಧ್ಯಪಾನ ಮಾಡಿ ವಾಹನ ಓಡಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.