ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಹೊಸ ವರ್ಷ ಸ್ವಾಗತಕ್ಕೆ ದೇಶವಿದೇಶಗಳಿಂದ ಲಕ್ಷಾಂತ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಡಿಸೆಂಬರ್ 30 ರಿಂದ ಗೋವಾದಲ್ಲಿ ವಿವಿದೆಡೆ ಓಲ್ಡಮ್ಯಾನ್ ಪ್ರತಿಕ್ರತಿ ಸಿದ್ಧಪಡಿಸುವ ಕಾರ್ಯ ಆರಂಭಗೊಂಡಿತ್ತು. ತಮ್ಮ ಹಳೇಯ ಬಟ್ಟೆ ಬಳಸಿ ಓಲ್ಡ ಮ್ಯಾನ್ ಸಿದ್ಧಪಡಿಸಿ ಡಿಸೆಂಬರ್ 31 ರ ಮಧ್ಯರಾತ್ರಿ ದಹನ ಮಾಡುವ ಪದ್ಧತಿಯಿದೆ. ಕಳೆದು ಹೋದ ಈ ವರ್ಷದಲ್ಲಿ ನಮಗೆ ಯಾವ ವಸ್ತು ಅಥವಾ ವಿಷಯ ಇಷ್ಟವಾಗಿಲ್ಲ, ಕೆಟ್ಟ ನೆನಪು ಇವುಗಳನ್ನೆಲ್ಲ ದಹಿಸಿ ಹೊಸ ವರ್ಷ ಸ್ವಾಗತಿಸುವ ಪದ್ಧತಿ ಗೋವಾದಲ್ಲಿದೆ.

ಕಳೆದುಹೋದ ಕೆಟ್ಟ ದಿನಗಳು ಮರುಕಳಿಸದೆಯೇ ಇರಲಿ ಹೊಸ ವರ್ಷದ ಮಾರ್ಗ ಸುರಳಿತವಾಗಿರಲಿ ಎಂಬುದು ಓಲ್ಡ ಮ್ಯಾನ್ ದಹಿಸುವ ಪದ್ಧತಿಯಿದೆ. ಇಂಗ್ಲೀಷ್ ಸಂಸ್ಕøತಿಯ ಪ್ರಕಾರ ಡಿಸೆಂಬರ್ 31 ರಣಂದು ಹಳೇಯ ವರ್ಷ ಮುಕ್ತಾಯಗೊಂಡು ಹೊಸ ವರ್ಷ ಆರಂಭಗೊಳ್ಳುತ್ತದೆ. ಗೋವಾದಲ್ಲಿ ಗಲ್ಲಿಗಲ್ಲಿಗಳಲ್ಲಿ ಡಿಸೆಂಬರ್ 31 ರಂದು ಓಲ್ಡ ಮ್ಯಾನ್ ಕಾಣಬಹುದಾಗಿದೆ. ಈ ಓಲ್ಡ ಮ್ಯಾನ್ ನನ್ನು ಡಿಸೆಂಬರ್ 31 ರ ಮಧ್ಯರಾತ್ರಿ ದಹಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರಲಾಗುತ್ತದೆ.