ಸುದ್ಧಿಕನ್ನಡ ವಾರ್ತೆ
Goa : ಗೋವಾದಲ್ಲಿ 2024 ರ ಆರಂಭದಲ್ಲಿ ಸೂಚನಾ ಸೇಠ್ ಇವಳು ಗೋವಾಕ್ಕೆ ಬಂದು ತನ್ನ ಮಗನನ್ನೇ ಕೊಂದ ಘಟನೆ ನಡೆದಿತ್ತು. ಇದೀಗ ವರ್ಷದ ಕೊನೆಯಲ್ಲಿ ಗೋವಾದ ಕಲಂಗುಟ್ ಬೀಚ್ ನಲ್ಲಿ ಪ್ರವಾಸಿಯೋರ್ವನ ಕೊಲೆ ನಡೆದಿದೆ. ಆಂಧ್ರಪ್ರದೇಶದ 28 ವರ್ಷದ ಯುವಕನನ್ನು ಕಲಂಗುಟ್ ಬೀಚ್ ನಲ್ಲಿ ಕೊಲೆ ನಡೆದ ಘಟನೆ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.
ಬೋಲಾರವಿ (28) ಎಂಬ ಆಂಧ್ರಪ್ರದೇಶ ಮೂಲದ ವ್ಯಕ್ತಿಯೇ ಕೊಲೆಯಾದ ಪ್ರವಾಸಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ ಮತ್ತು ರೆಸ್ಟೊರೆಂಟ್ ನಲ್ಲಿದ್ದ ಮೂರು ಜನ ಕಾರ್ಮಿಕರನ್ನು ಕಲಂಗುಟ್ ಪೋಲಿಸರು ಬಂಧಿಸಿದ್ದಾರೆ. ಬಾರ್ ಮತ್ತು ರೆಸ್ಟೊರೆಂಟ್ ಮಾಲೀಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಮೃತ ಬೋಲಾರವಿ ಈತ ತನ್ನ ಕೆಲ ಸ್ನೇಹಿತರೊಂದಿಗೆ ಬಾರ್ ಮತ್ತು ರೆಸ್ಟೊರೆಂಟ್ ನಲ್ಲಿ ಊಟಕ್ಕೆ ಬಂದಿದ್ದರು. ಬಾರ್ ಮತ್ತು ರೆಸ್ಟೊರೆಂಟ್ ಬಂದ್ ಆದ ನಂತರ ಈತ ಕೆಲ ಪದಾರ್ಥಗಳ ಬೇಡಿಕೆ ಇಟ್ಟ ಎನ್ನಲಾಗಿದೆ. ಆದರೆ ಅಲ್ಲಿದ್ದ ಕರ್ಮಚಾರಿಗಳು ಈಗ ಮತ್ತೆ ಅಡುಗೆ ಸಿದ್ಧಪಡಿಸಲು ಸಾಧ್ಯವಿಲ್ಲ ಎಂದರು. ಇದರಿಂದಾಗಿ ಬಾರ್ ಮತ್ತು ರೆಸ್ಟೊರೆಂಟ್ ಕರ್ಮಚಾರಿಗಳು ಮತ್ತು ಪ್ರವಾಸಿಗನ ನಡುವೆ ಜಗಳ ಆರಂಭಗೊಂಡಿತು. ಅಲ್ಲಿದ್ದ ಕರ್ಮಚಾರಿಗಳು ಈ ಪ್ರವಾಸಿಗನ ಮೇಲೆ ಹಲ್ಲೆ ನಡೆಸಿದರು. ಗಂಭೀರವಾಗಿ ಗಾಯಗೊಂಡಿದ್ದ ಬೋಲಾರವಿ ಈತನನ್ನು ಕಾಂದೋಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಆತ ಸಾವನ್ನಪ್ಪಿದ್ದ.
2024 ರ ಆರ0ಭದಲ್ಳು ಕೊಲೆ ಪ್ರಕರಣ...
ಪ್ರಸಕ್ತ ವರ್ಷದ ಆರಂಭದಲ್ಲಿ ಬೆಂಗಳೂರಿನ ಸ್ಟಾರ್ಟ ಅಪ್ ಕಂಪನಿಯ ಸಿಇಒ ಸೂಚನಾ ಸೇಠದ ಇವಳು ತನ್ನ 5 ವರ್ಷದ ಮಗನನ್ನು ಗೋವಾದ ಹೋಟೆಲ್ ನಲ್ಲಿ ಕೊಲೆ ಮಾಡಿದ್ದಳು. ಗೋವಾದಲ್ಲಿಂದ ಪರಾರಿಯಾಗುತ್ತಿದ್ದ ಈಕೆಯನ್ನು ಕರ್ನಾಟಕದಲ್ಲಿ ಪೋಲಿಸರು ಬಂಧಿಸಿದ್ದರು.