ಸುದ್ಧಿಕನ್ನಡ ವಾರ್ತೆ
Goa: ಗೋವಾದ ಕರಾವಳಿ ಭಾಗದ ಹೋಟೆಲ್ ಗಳು, ರೆಸ್ಟೊರೆಂಟ್ ಗಳು, ರೆಸಾರ್ಟಗಳು ಹಳೇಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಪ್ರವಾಸೋದ್ಯಮವನ್ನು ಆನಂದಿಸಲು ಸಿದ್ಧವಾಗಿದೆ. ಗೋವಾದ ಬೀಚ್ ಭಾಗದಲ್ಲಿರುವ ಎಲ್ಲ ಹೋಟೆಲ್ ಗಳು ಭರ್ತಿಯಾಗಿದೆ.

ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗೋವಾದ ವಿವಿದೆಡೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿಯಿಡಿ ಸಂಗೀತ ಕಾರ್ಯಕ್ರಮ ಜರುಗಲಿದೆ. ಹೊಸ ವರ್ಷಕ್ಕೆ ಬರುವ ಪ್ರವಾಸಿಗರು ಈ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಗೋವಾದಲ್ಲಿ ವಿವಿದೆಡೆ ಆಯೋಜಿಸುವ ಪಾರ್ಟಿಗಳ ಶುಲ್ಕ 500 ರಿಂದ 7000 ರೂ ವರೆಗೆ ಶುಲ್ಕ ಪಡೆಯಲಾಗುತ್ತದೆ.

ಮೋರ್ಜಿಯ ಉದ್ಯಮಿ ಸಂದೇಶ ಶೇಟ್ ಸುದ್ಧಿಗಾರರೊಂದಿಗೆ ಮಾತನಾಡಿ- ನಿಯಮಾನುಸಾರ ಸಂಗೀತ ನುಡಿಸಲು ಸರ್ಕಾರದಿಂದ ಪರವಾನಗಿ ನೀಡಲಾಗುತ್ತದೆ. ಅವುಗಳನ್ನು ಸರಿಯಾಗಿ ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಇದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂಬ ಅಭಿಪ್ರಾಯಪಟ್ಟರು.