ಸುದ್ಧಿಕನ್ನಡ ವಾರ್ತೆ
Goa : ಗೋವಾ ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ದೇಶವಿದೇಶಿಯ ಪ್ರವಾಸಿಗರು ಗೋವಾಕ್ಕೆ ಆಗಮಿಸಿದ್ದಾರೆ. ಗೋವಾದ ಕಲಂಗುಟ್, ಬಾಗಾ, ಸಿಕೇರಿ, ವಾಗಾತೋರ್, ಮೀರಾಮಾರ್, ಕೋಲ್ವಾ ಹೀದೆ ಪ್ರಸಿದ್ಧ ಬೀಚ್ ಗಳು ಪ್ರವಾಸಿಗರಿಂದ ತುಂಬಿರುವುದು ಕಂಡುಬರುತ್ತಿದೆ. ಪ್ರವಾಸಿಗರಿಗೆ ತೊಂದರೆ ಕೊಡುವ ಏಜೆಂಟಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಅನಧೀಕೃತ ಏಜಂಟ್ ಗಳನ್ನು ಕಲಂಗುಟ್ ಪೋಲಿಸರು ಬಂಧಿಸಿದ್ದಾರೆ.
ಕಲಂಗುಟ್ ಪೋಲಿಸರು ನೀಡಿರುವ ಮಾಹಿತಿಯ ಅನುಸಾರ ರಾಜ್ಯದಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಠಿಯಿಂದ ಕಲಂಗುಟ್ ಬೀಚ್ ನಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 25 ಜನ ಗಲಾಲಿಗಳು ಮತ್ತು ಏಜೆಂಟರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ನೀಡಿದರು.
ಇಂತಹ ಏಜೆಂಟರು ಮತ್ತು ದಲ್ಲಾಲಿಗಳ ಬಲೆಗೆ ಪ್ರವಾಸಿಗರು ಬೀಳದಂತೆ ಪೋಲಿಸರು ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲದೆಯೇ ಇಂತಹ ಏಜೆಂಟರು ಮತ್ತು ದಲ್ಲಾಲಿಗಳು ಕಂಡುಬಂದಲ್ಲಿ ಪೋಲಿಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.