ಸುದ್ಧಿಕನ್ನಡ ವಾರ್ತೆ
Goa: ಕ್ರಿಸ್ ಮಸ್ ದಿನದಂದು ಗೋವಾದ ಕಲಂಗುಟ್ ಸಮುದ್ರದಲ್ಲಿ ಪ್ರವಾಸಿ ಬೋಟ್ ಮುಳುಗಿದ ದುರ್ಘಟನೆ ಹಿಂದೆ ಇರುವ ಕಟು ಸತ್ಯವೊಂದು ಬೆಳಕಿಗೆ ಬಂದಿದೆ. ಈ ಬೋಟ್ ನಲ್ಲಿ ಸುಮಾರು 20 ರಿಂದ 25 ಜನರಿದ್ದರು ಎಂಬ ಮಾಹಿತಿಯನ್ನು ಇದೇ ಬೋಟ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರೋರ್ವರು ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಈ ಬೋಟ್ ನಲ್ಲಿ ಹೆಚ್ಚಿನ ಪ್ರವಾಸಿಗರನ್ನು ಕರೆದೊಯ್ದಿರುವುದೇ ಈ ದುರ್ಘಟನೆಗೆ ಕಾರಣ ಎಂದೇ ಹೇಳಲಾಗತ್ತಿದೆ.

ಈ ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು 4 ರಿಂದ 5 ಜನರ ಸ್ಥಿತಿ ಗಂಭೀರವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಇಬ್ಬರನ್ನು ಬಂಧಿಸಿದ್ದು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಈ ದುರ್ಘಟನೆಗೆ ಕಾರಣೀಬೂತವಾಗಿರುವ ಪ್ರವಾಸಿ ಬೋಟ್ ಗೆ ಕ್ಯಾಪ್ಟನ್ ಆಫ್ ಪೋರ್ಟ ನೋಟಿಸ್ ಜಾರಿಗೊಳಿಸಿದ್ದು ಪರವಾನಗಿಗಿಂತ ಹೆಚ್ಚಿನ ಪ್ರವಾಸಿಗರನ್ನು ಕರೆದೊಯ್ದಿದ್ದಕ್ಕಾಗಿ ಈ ಬೋಟ್ ಗೆ ನಿರ್ಬಂಧ ಹೇರಲಾಗಿದೆ.