ಸುದ್ಧಿಕನ್ನಡ ವಾರ್ತೆ
Goa: ಗೋವಾ ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೇಕರ್ ರವರು ತಮ್ಮ ಕುಟುಂಬ ಸಮೇತರಾಗಿ ಅಯೋಧ್ಯೆಯ ಶ್ರೀರಾಮಲಲ್ಲಾನ ದರ್ಶನ ಪಡೆದುಕೊಂಡಿದ್ದಾರೆ. ಈ ಸಂರ್ದದಲ್ಲಿ ಪಾರ್ಸೇಕರ್ ರವರು ವನ್ ನೇಶನ್ ವನ್ ಇಲೆಕ್ಷನ್ ಗೆ ತಮ್ಮ ಸಹಮತ ಸೂಚಿಸಿದ್ದಾರೆ. ಇದರಿಂದಾಗಿ ಹಣದ ಉಳಿತಾಯವಾಗಲಿದೆ. ಇದು ಕೇಂದ್ರ ಸರ್ಕಾರದ ಉತ್ತಮ ನಿರ್ಣಯವಾಗಿದೆ ಎಂದು ಪಾರ್ಸೇಕರ್ ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಗೋವಾದ ಮಾಜಿ ಮುಖ್ಯಮಂತ್ರಿ ಪಾರ್ಸೇಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಇವರ ಮೇಲೆ ಕಾಳಜಿಯಿದೆ. ನಮ್ಮ ರಾಮಮಂದಿರ ನಿರ್ಮಾಣ ಮಾಡಿರುವ ಪ್ರಧಾನಿ ಮೋದಿಯವರು ಬಾಂಗ್ಲಾದೇಶದ ಸಮಸ್ಯೆಯನ್ನೂ ಬಗೆಹರಿಸಲಿದ್ದಾರೆ ಎಂದರು.

ಕೇಂದ್ರ ಗೃಹಮಂತ್ರಿ ಅಮಿತ್ ಶಾ ರವರು ಬಾಬಾಸಾಹೆಬ್ ಅಂಬೇಡ್ಕರ್ ರವರ ಕುರಿತು ನೀಡರುವ ಹೇಳಿಕೆಯ ಕುರಿತು ಪಾರ್ಸೇಕರ್ ಪ್ರತಿಕ್ರಿಯೆ ನೀಡಿ- ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ನಡೆಸಿರುವ ಹುನ್ನಾರ ಇದಾಗಿದೆ. ಯಾವುದಾದರೊಂದು ಭಾಷಣದ ಒಂದೆರಡು ಶಬ್ದದ ತುಣುಕನ್ನು ಸೇರಿಸಿ ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಲಾಭ ಪಡೆದುಕೊಳ್ಳಲು ಯತ್ನಿಸಿವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.