ಸುದ್ಧಿಕನ್ನಡ ವಾರ್ತೆ
Goa: ಶಿಕಾರಿಗಾಗಿ ತೆರಳಿದ್ದ ಗೋವಾದ ವಾಳಪೈ ಊರಿನ 22 ವರ್ಷದ ಯುಕ ಬಂದೂಕಿನ ಗುಂಡು ತಗುಲಿ ಸಾವನ್ನಪ್ಪಿದ್ದಾನೆ. ನಾಣುಸ್ ವಾಳಪೈಯ ಮೂವರು ಶಿಕಾರಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆಕಸ್ಮಿಕವಾಗಿ ಬಂದೂಕಿನಿಂದ ಹಾರಿದ ಗುಂಡು ಈ ಯುವಕನಿಗೆ ತಗುಲಿದ್ದರಿಂದ ಈ ಯುವಕ ಸಾವನ್ನಪ್ಪಿರುವುದಾಗಿ ಪ್ರಾಥಮಿಕವಾಗಿ ತಿಳಿದುಬಂದಿದೆ.

ಸಮದ್ ಖಾನ್ ಎಂಬ ಯುವಕನೇ ಗುಂಡು ತಗುಲಿ ಸಾವನ್ನಪ್ಪಿರುವ ಯವಕನಾಗಿದ್ದಾನೆ. ವಾಳಪೈಯ ಮೂರು ಜನರು ಪಾಟವಣ ಸತ್ತರಿಯಲ್ಲಿ ಶಿಕಾರಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಬಂದೂಕಿನಿಂದ ಆಕಸ್ಮಿಕವಾಗಿ ಗುಣಡು ಹಾರಿದ್ದರಿಂದ ಸಮತ್ ಖಾನ್ ಸಾವನ್ನಪ್ಪಿದ್ದಾನೆ.

ಪೋಲಿಸರು ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಷಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.