ಸುದ್ಧಿಕನ್ನಡ ವಾರ್ತೆ
Goa : ಗೋವಾದ ಕಲಂಗುಟ್ ಬೀಚ್ ನಲ್ಲಿ ಭೀರಕ ಘಟನೆಯೊಂದು ಬುಧವಾರ ಸಂಭವಿಸಿದೆ. 13 ಪ್ರವಾಸಿಗರಿದ್ದ ಸ್ಪೋಟ್ಸ ಬೋಟ್ ಕಲಂಗುಟ್ ಬೀಚ್ ಸಮುದ್ರದಲ್ಲಿ ಮುಳುಗಿ ಘಟನೆ ನಡೆದಿದೆ. ಈ ಬೋಟ್ ನಲ್ಲಿದ್ದ ಎಲ್ಲ ಪ್ರವಾಸಿಗರನ್ನು ರಕ್ಷಿಸಲಾಗಿದ್ದು, ದುರಾದೃಷ್ಠವಶಾತ್ ಒಬ್ಬ ಪ್ರವಾಸಿಗ ಸಾವನ್ನಪ್ಪಿದ್ದಾರೆ.
ಈ ಪ್ರವಾಸಿಗರ ಪೈಕಿ ಒಬ್ಬ ಪುಟ್ಟ ಮಗುವಿನೊಂದಿಗೆ ಇಬ್ಬರು ಗಂಭೀರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಪ್ರವಾಸಿಗರಿದ್ಧ ಬೋಟ್ ಮುಳುಗಿದ ನಂತರ ಘಟನಾ ಸ್ಥಳದಲ್ಲಿದ್ದ ಪೋಲಿಸ್, ಜೀವರಕ್ಷಕ ದಳ, ಕಲಂಗುಟಗ ಪೋಲಿಸರು, ಪಿಂಕ್ ಪೋರ್ಸ ಸ್ಥಳಕ್ಕೆ ದಾಖಲಾಗಿ ರಕ್ಷಣಾ ಕಾರ್ಯವನ್ನು ಕೈಗೊಂಡದ್ದಾರೆ. ಆದರೆ ಒಬ್ಬ ಪ್ರವಾಸಿ ಸಾವನ್ನಪ್ಪಿದ್ದು ಇತರ ಪ್ರವಾಸಿಗರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.