ಸುದ್ಧಿಕನ್ನಡ ವಾರ್ತೆ
Goa : ಗೋವಾ ರಾಜ್ಯದ ಸುಪುತ್ರ ಹಾಗೂ ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. (Bihar Governor Rajendra Arlekar has been appointed as the Governor of Kerala.) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜೇಂದ್ರ ಅರ್ಲೇಕರ್ ಜೊತೆಗೆ ವಿವಿಧ ರಾಜ್ಯಗಳಲ್ಲಿ ಐವರು ರಾಜ್ಯಪಾಲರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ರಾಜೇಂದ್ರ ಅರ್ಲೇಕರ್ ಮಾಧ್ಯಮಗಳೊಂದಿಗೆ ಮಾತನಾಡಿ-ನಾನು ಕೇರಳದ ರಾಜ್ಯಪಾಲರಾಗಿ ವರ್ಗಾವಣೆಗೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಕೇರಳದ ವ್ಯಕ್ತಿಯೊಬ್ಬರು ಗೋವಾದ ರಾಜ್ಯಪಾಲರಾಗಿದ್ದು, ಗೋವಾದ ವ್ಯಕ್ತಿಯೊಬ್ಬರು ಕೇರಳದ ರಾಜ್ಯಪಾಲರಾಗಿರುವುದು ಕಾಕತಾಳೀಯ. ಕೇರಳದಲ್ಲಿ ಸಿಪಿಎಂ ಸರಕಾರವಿದ್ದರೂ ಸಾಂವಿಧಾನಿಕವಾಗಿ ಅದು ರಾಜ್ಯಪಾಲರ ಸರ್ಕಾರವಾಗಿರುತ್ತದೆ. ಇದರಿಂದ ನನಗೆ ಕೇರಳದಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ ಎಂದು ವರ್ಗಾವಣೆ ಬಳಿಕ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಹೇಳಿದ್ದಾರೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಪ್ರಪ್ರಥಮವಾಗಿ ರಾಜೇಂದ್ರ ಅರ್ಲೇಕರ್ ರವರು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದರು. ನಂತರ ಅವರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಈಗ ಅವರು ಕೇರಳ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.(First Rajendra Arlekar was the Governor of Himachal Pradesh. Later he was appointed as the Governor of Bihar. Now he has been appointed as the Governor of Kerala.)
ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಮಣಿಪುರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಮಿಜೋರಾಂ ರಾಜ್ಯಪಾಲರಾಗಿ ಮಾಜಿ ಸೇನಾ ಮುಖ್ಯಸ್ಥ ವಿಜಯ್ ಕುಮಾರ್ ಸಿಂಗ್ ಮತ್ತು ಡಾ. ಹರಿಬಾಬು ಕಂಬಂಪತಿ ಅವರನ್ನು ಒಡಿಶಾ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಅವರು ಮಿಜೋರಾಂ ರಾಜ್ಯಪಾಲರಾಗಿದ್ದರು.