ಸುದ್ಧಿಕನ್ನಡ ವಾರ್ತೆ
Goa: ಗೋವಾ ಸರ್ಕಾರದಲ್ಲಿ ನೇತೃತ್ವ ಬದಲಾವಣೆ ಹಾಗೂ ಮಂತ್ರಿಮಂಡಳ ಪುನರ್ರಚನೆ ಇದು ಕೇವಲ ಸುಳ್ಳುಸುದ್ಧಿಯಾಗಿದ್ದು, ನೇತೃತ್ವ ಬದಲಾವಣೆಯಲ್ಲಿ ಯಾವುದೇ ರಾಜಿಯಿಲ್ಲ. ಗೋವಾದಲ್ಲಿ ಕೇಂದ್ರ ಬಿಜೆಪಿ ವರಿಷ್ಠರಿಂದ ಹೊಸ ರಾಜಕೀಯ ಪ್ರಯೋಗದ ಯಾವುದೇ ಸಾಧ್ಯತೆಯಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಿದ್ದಾರೆ. ಸದ್ಯ ಗೋವಾದಲ್ಲಿ ಪ್ರಮೋದ ಸಾವಂತ್ ರವರು ಉತ್ತಮ ರೀತಿಯಲ್ಲಿ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಪಕ್ಷದೊಳಗೆ ಕೆಲವರಿಗೆ ತಾವು ಮುಖ್ಯಮಂತ್ರಿಯಾಗುವ ಇಚ್ಛೆ ಆಗಾಗ ಹೊರಹಾಕಿದಾಗ ನೇತೃತ್ವ ಬದಲಾವಣೆಯ ಹೊಗೆಯಾಡುವಂತಾಗುತ್ತಿದೆ ಎಂದುಬು ರಾಜಕೀಯ ವಿಶ್ಲೇಷಣೆಯಾಗಿದೆ.
ಮಂತ್ರಿಮಂಡಳದಲ್ಲಿ ಸಣ್ಣಪುಟ್ಟ ಬದಲಾವಣೆಗೆ ಬಿಜೆಪಿ ವರಿಷ್ಠರು ಸಿದ್ಧರಿದ್ದಾರೆ ಎನ್ನಲಾಗುತ್ತಿದ್ದು, ಮಂತ್ರಿಮಂಡಳ ಪುನರ್ರಚನೆ ಅಥವಾ ನೇತೃತ್ವ ಬದಲಾವಣೆಗೆ ಕೇಂದ್ರದಲ್ಲಿ ಸಮ್ಮತಿ ವ್ಯಕ್ತವಾಗಿಲ್ಲ ಎಂದೇ ಹೇಳಲಾಗುತ್ತಿದೆ. ಒಟ್ಟಾರೆ ಗೋವಾ ಮಂತ್ರಿಮಂಡಳ ವಿಸ್ತರಣೆ ಮತ್ತು ನೇತೃತ್ವದ ಕುರಿತು ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದೇ ಹೇಳಲಾಗುತ್ತಿದೆ.