ಸುದ್ಧಿಕನ್ನಡ ವಾರ್ತೆ
Goa: ಹವ್ಸಾಸವಾಗಿ ವಾಟ್ಸಪ್ನಲ್ಲಿ ಪ್ರಾರಂಬ ಮಾಡಿದ ಭಗವದ್ಗೀತಾ,ಸ್ತೋತ್ರಗಳು ಹಾಗು ಸಹಸ್ರನಾಮದ ಪಠಣವನ್ನು ಪ್ರಾರಂಬಿಸಿ ಕಳೆದ ನಾಲ್ಕೈದು ವರ್ಷಗಳಿಂದ ಭಗವಧ್ಗೀತಾ ಕಲಿಕೆ ಆರಂಭಿಸಿದ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಬಾಗಿನಕಟ್ಟಾದ ಒಂದು ಪುಟ್ಟ ಹಳ್ಳಿಯ ಸುಬ್ರಹ್ಮಣ್ಯ ಅನಂತ ಗಾಂವಕರ್ ರವರನ್ನು ಗೋವಾದ ಪುರೋಹಿತ ಮಂಜುನಾಥ ಭಟ್ ಮತ್ತು ಹೇಮಾ ಭಟ್ ದಂಪತಿಗಳು ವಿಶೇಷವಾಗಿ ಸನ್ಮಾನಿಸಿದರು.
ಗೋವಾದ ಮಾರ್ಶೆಲ್ ನ ಶ್ರೀ ಸಾಯಿಬಾಬಾ ಭಕ್ತ ಮಂದಿರದಲ್ಲಿ ಶನಿವಾರ ಮಧ್ಯಾನ್ಹ ಲಲಿತಾ ಭಜನಾ ಮಂಡಳಿ ಗೋವಾ ರವರು ನಡೆಸಿದ ಮತ್ತು ಪುರೋಹಿತ ನಾರಾಯಣ ಭಟ್ ರವರು ಆಯೋಜಿಸಿದ್ದ ಭಗವಧ್ಗೀತಾ ಸಪ್ತಾಹದ ಸಮಾಪ್ತಿ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಗಾಂವಕರ್ ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸುಬ್ರಹ್ಮಣ್ಯ ಗಾಂವಕರ್ ರವರು ಹವ್ಸಾಸವಾಗಿ ವಾಟ್ಸಪ್ನಲ್ಲಿ ಪ್ರಾರಂಬ ಮಾಡಿದ ಭಗವದ್ಗೀತಾ,ಸ್ತೋತ್ರಗಳು ಹಾಗು ಸಹಸ್ರನಾಮದ ಪಠಣವನ್ನು ಪ್ರಾರಂಬಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಳಿಗ್ಗೆ ಐದುವರೆಗೆ ಪ್ರಾರಂಬ ಮಾಡಿ ಸಂಜೆ ಏಳು ವರೆಯವರೆಗೆ ನಿರಂತರವಾಗಿ ತರಗತಿ ನಡೆಸಿ ಕೊಂಡು ಬಂದಿದ್ದಾರೆ.ಅಲ್ಲದೆ ವಾಟ್ಸಪ್ ಗುಂಪಿನಲ್ಲಿಯೇ ಶ್ಲೋಕ ,ಭಗವದ್ಗೀತಾ ಹಾಗು ಶಾಂಕರಸ್ತೋತ್ರದ ಹಾಡು ಹೀಗೆ ಹಲವಾರು ಕಲಿಕೆಯನ್ನು ಸಹ ಕಲಿಸುತ್ತಿದ್ದಾರೆ.
ಸದ್ಯ ಸುಮಾರು 300 ಜನರಿರುವ ವಾಟ್ಸಾಪ್ ಗುಂಪಿನಲ್ಲಿ ಭಗವದ್ಗೀತೆ ಮತ್ತು ವಿವಿಧ ಸ್ತೋತ್ರಗಳ ಕಲಿಕೆ ತರಗತಿ ನಡೆಸುತ್ತಿದ್ದಾರೆ. ಸುಬ್ರಹ್ಮಣ್ಯ ಗಾಂವ್ಕರ್ ರವರ ಈ ನಿಸ್ವಾರ್ಥ ಸೇವೆ ಗುರುತಿಸಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.