ಸುದ್ಧಿಕನ್ನಡ ವಾರ್ತೆ
Goa: ಕಳೆದ ಹಲವು ವರ್ಷಗಳಿಂದ ಗೋವಾ ರಾಜ್ಯದಲ್ಲಿ ಕನ್ನಡ ದಿನಪತ್ರಿಕೆಗಳ ವರದಿಗಾರರಾಗಿ ಹಾಗೂ ವಿವಿಧ ಟಿವಿ ಮಾಧ್ಯಮಗಳಲ್ಲಿಯೂ ಗೋವಾದಲ್ಲಿ ಕನ್ನಡದ ಸೇವೆ ಸಲ್ಲಿಸುತ್ತಿರುವ ಪತ್ರಕರ್ತ ಪ್ರಕಾಶ್ ಭಟ್ ದಂಪತಿಗಳನ್ನು ಗೋವಾದ ಹಿರಿಯ ಪುರೋಹಿತರಾದ ನಾರಾಯಣ ಭಟ್ ದಂಪತಿಗಳು ವಿಶೇಷ ಸನ್ಮಾನ ನೀಡಿ ಗೌರವಿಸಿದರು.

ಗೋವಾದ ಮಾರ್ಶೆಲ್ ನ ಶ್ರೀ ಸಾಯಿಬಾಬಾ ಭಕ್ತ ಮಂದಿರದಲ್ಲಿ ಶನಿವಾರ ಮಧ್ಯಾನ್ಹ ಲಲಿತಾ ಭಜನಾ ಮಂಡಳಿ ಗೋವಾ ರವರು ನಡೆಸಿದ ಹಾಗೂ ಹಿರೀಯ ಪುರೋಹಿತರೂ ಕಾರ್ಯಕ್ರಮದ ಆಯೋಜಕರೂ ಆಗಿರುವ ನಾರಾಯಣ ಭಟ್ ಮತ್ತು ಸರಸ್ವತಿ ಭಟ್ ದಂಪತಿಗಳು ಭಗವಧ್ಗೀತಾ ಸಪ್ತಾಹದ ಸಮಾಪ್ತಿ ಕಾರ್ಯಕ್ರಮದಲ್ಲಿ ಪತ್ರಕರ್ತ ಪ್ರಕಾಶ ಭಟ್ ಮತ್ತು ಶ್ರೀಲತಾ ಭಟ್ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಿದರು.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ಪ್ರಕಾಶ ಕೃಷ್ಣ ಭಟ್ ರವರು ಕಳೆದ ಸುಮಾರು 20 ವರ್ಷಗಳಿಂದ ಗೋವಾದಲ್ಲಿ ವಿವಿಧ ದಿನಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳಲ್ಲಿ ಗೋವಾದ ಕನ್ನಡ ಮತ್ತು ಕನ್ನಡಿಗರ ಸುದ್ಧಿಗಳನ್ನು ವಿವಿಧ ಭಾಗಗಳಿಗೆ ತಲುಪಿಸುವ ಸಂಪರ್ಕ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಇವರಿಗೆ ಹತ್ತಾರು ಪ್ರಶಸ್ತಿಗಳೂ ಬಂದಿವೆ. ಇವರ ಕನ್ನಡದ ಸೇವೆ ಗುರುತಿಸಿ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.