ಸುದ್ಧಿಕನ್ನಡ ವಾರ್ತೆ
Goa: ಗೇಟ್ ವೇ ಆಫ್ ಇಂಡಿಯಾ ದಿಂದ ಹೊರಟಿದ್ದ ಪ್ರವಾಸಿ ಬೋಟ್ ನೌಕಾ ದಳದ ಬೋಟ್ ಗೆ ಡಿಕ್ಕಿ ಹೊಡೆದಿದ್ದರಿಂದ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 13 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಗೋವಾದ ಉಸ್ಕೈ ಗ್ರಾಮದ 37 ವರ್ಷದ ಸಫಿನಾ ಪಠಾಣ್ ಎಂಬ ಮಹಿಳೆ ಸಾವನ್ನಪ್ಪಿದ್ದಾಳೆ. ಈಕೆಯ 8 ವರ್ಷದ ಬಾಲಕ ನಾಪತ್ತೆಯಾಗಿದ್ದಾನೆ.

ಈ ಬೋಟ್ ನಲ್ಲಿ ಎಲ್ಲರಿಗೂ ಲೈಫ್ ಜಾಕೇಟ್ ನೀಡಿರಲಿಲ್ಲ ಎಂದು ಪಠಾಣ್ ಕುಟುಂಬ ಹೇಳಿದೆ. ಘಟನೆಯ ದಿನದಂದು ಸಫಿನಾ ಈಕೆ ತನ್ನ 8 ವರ್ಷದ ಬಾಲಕನನ್ನು ಕೈಹಿಡಿದು ಬೋಟ್ ಹತ್ತಿದ್ದಳು. ಇವರಿ ಲೈಫ್ ಜಾಕೇಟ್ ನೀಡಿರಲಿಲ್ಲ ಎನ್ನಲಾಗಿದೆ.

ಸಫಿನಾ ಈಕೆಯ ಮೃತದೇಹವನ್ನು ಗುರುವಾರ ರಾತ್ರಿ ಗೋವಾಕ್ಕೆ ತಂದು ಶುಕ್ರವಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.