ಸುದ್ಧಿಕನ್ನಡ ವಾರ್ತೆ
Goa: ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ದಿಢೀರ್ ದೆಹಲಿಗೆ ತೆರಳಿದ್ದು ಅವರೊಂದಿಗೆ ಶಾಸಕ ಪ್ರೇಮೇಂದ್ರ ಶೇಟ್, ದಾಜಿ ಸಾಲಕರ್, ಜೀತ್ ಅರೋಲಕರ್ ರವರು ಕೂಡ ದೆಹಲಿಗೆ ತೆರಳಿದ್ದಾರೆ. ಈ ದಿಢೀರ್ ದೆಹಲಿ ಪ್ರಯಾಣವು ಗೋವಾ ಮಂತ್ರಿಮಂಡಳದಲ್ಲಿ ಹಲವು ಬದಲಾವಣೆ ಸಾಧ್ಯತೆಯಿದೆ ಎಂಬ ಭಾರಿ ಚರ್ಚೆ ನಡೆಯುತ್ತಿದೆ.

ಗೋವಾದ ಕೆಲ ಸಚಿವರ ಕಾರ್ಯ ಚಟುವಟಿಕೆಯ ಬಗ್ಗೆ ಗೋವಾ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದೇ ಹೇಳಲಾಗಿದೆ. ಗೋವಾದಲ್ಲಿ ಮುಂಬರುವ ಜಿಲ್ಲಾ ಪಂಚಾಯತ ಚುನಾವಣೆ, ಪಾಲಿಕೆ ಚುನಾವಣೆ, ರಾಜಕೀಯ ಸಮೀಕರಣ ಲಕ್ಷದಲ್ಲಿಟ್ಟುಕೊಂಡು ಮಂತ್ರಿಮಂಡಳದಲ್ಲಿ ಕೆಲ ಬದಲಾವಣೆ ಅನಿವಾರ್ಯ ಎಂದೇ ಹೇಳಲಾಗುತ್ತಿದೆ.