ಸುದ್ಧಿಕನ್ನಡ ವಾರ್ತೆ
Goa: ಗೋವಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ  (Goa GMC) ಶೀಘ್ರದಲ್ಲಿಯೇ ಅತ್ಯಾಧುನಿಕ ರೋಬೋಟಿಕ್ ಸರ್ಜಿಕಲ್ ಯೂನಿಟ್ (Robotic Surgical Unit)  ಆರಂಭಗೊಳ್ಳಲಿದೆ. ಈ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ. ಇದರಿಂದಾಗಿ ರೋಗಿಗಳಿಗೆ ಶೀಘ್ರ ಉಪಚಾರ ನೀಡಲು ಸಾಧ್ಯವಾಗಲಿದೆ ಎಂದು ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ಹೇಳಿದ್ದಾರೆ.

ರೋಬೋಟಿಕ್ ಸರ್ಜಿಕಲ್ ಯೂನಿಟ್ (Robotic Surgical Unit)  ಸಹಾಯದಿಂದ ಅತ್ಯಂತ ಸೂಕ್ಷ್ಮವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಇದರಿಂದಾಗಿ ರೋಗಿಗೆ ತೊಂದರೆಯೂ ಕಡಿಮೆ ಮತ್ತು ಶೀಘ್ರದಲ್ಲಿಯೇ ರೋಗಿಗಳು ಗುಣಮುಖರಾಗಿ ಮನೆಗೆ ವಾಪಸ್ಸಾಗಲು ಕೂಡ ಹೆಚ್ಚು ಅನುಕೂಲವಾಗಲಿದೆ, ಗೋವಾದಲ್ಲಿ ಜಾಗತಿಕ ದರ್ಜೆಯ ಆರೋಗ್ಯ ಸೇವೆ ಲಭಿಸುವಂತೆ ಮಾಡಲು ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಚಿವ ರಾಣೆ ನುಡಿದರು.

ಗೋವಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರೋಬೋಟಿಕ್ ಸರ್ಜಿಕಲ್ ಯೂನಿಟ್  (Robotic Surgical Unit) ಸ್ಥಾಪನೆಗೊಂಡ ನಂತರ ವೈದ್ಯಕೀಯ ಸಂಸ್ಥೆಗಳಲ್ಲಿ ಗೋವಾ ರಾಜ್ಯವು ವೈದ್ಯಕೀಯ ಕ್ಷೇತ್ರದಲ್ಲಿ ದೇಶದಲ್ಲಿಯ ಅತ್ಯಂತ ಪ್ರಗತಿಹೊಂದಿದ ರಾಜ್ಯ ಎಂದಾಗಲಿದೆ ಎಂದು ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ಮಾಹಿತಿ ನೀಡಿದರು.