ಸುದ್ಧಿಕನ್ನಡ ವಾರ್ತೆ

Goa : ಗೋವಾ ಮಾಂಡವಿ ನದಿಯಲ್ಲಿರುವ ಕ್ಯಾಸಿನೊಗಳ ಅವಧಿಯನ್ನು 2027 ರ ವರೆಗೆ ಸಿವಸ್ತರಿಸಲು ಗೋವಾ ಮಂತ್ರಿಮಂಡಳಲ ಬೈಠಕ್ ನಲ್ಲಿ ನಿರ್ಧರಿಸಲಾಗಿದೆ. ಆದರೆ ಇದು ಕೊನೇಯ ಪರವಾನಗಿ ವಿಸ್ತರಣೆಯಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ,

ಪಣಜಿಯಲ್ಲಿ ಮಂತ್ರಿಮಂಡಳ ಬೈಠಕ್ ನಂತರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ- ಪಣಜಿ ಮಾಂಡವಿ ನದಿಯಲ್ಲಿ ಸದ್ಯ 6 ಕ್ಯಾಸಿನೊ ಹಡಗುಗಳಿವೆ. ಪ್ರತಿ 6 ತಿಂಗಳಿಗೊಮ್ಮೆ ಈ ಕ್ಯಾಸಿನೊಗಳ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತದೆ. ಆದರೆ ಈಗ ಈ ಕ್ಯಾಸಿನೊಗಳಿಗೆ ಒಂದೇ ಬಾರಿಗೆ ಎರಡೂವರೆ ವರ್ದಗಳ ಅವಧಿ ವಿಸ್ತರಣೆ ಲಭಿಸಿದೆ. ಈ ಕ್ಯಾಸಿನೊಗಳಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ ಸುಮಾರು 450 ಕೋಟಿ ರೂ ಆದಾಯ ಲಭಿಸುತ್ತದೆ. ಕ್ಯಾಸಿನೊ ಹಡಗುಗಳ ಸ್ಥಳಾಂತರಿಸಲು ಸ್ಥಳಾವಕಾಶ ಲಭ್ಯವಾದ ನಂತರ ಮಾಂಡವಿಯಿಂದ ಈ ಹಡಗುಗಳನ್ನು ತೆರವುಗೊಳಿಸಬೇಕಾಗಲಿದೆ ಎಂದರು.

2013 ರಲ್ಲಿ ಪಣಜಿ ನಿವಾಸಿಗಳ ವಿರೋದಧ ಹಿನ್ನೆಲೆಯಲ್ಲಿ ಮಾಂಡವಿ ನದಿಯಲ್ಲಿರುವ ಆಫ್ ಶೇರ್ ಕ್ಯಾಸಿನೊಗಳನ್ನು ಸ್ಥಳಾಂತರಿಸಲು ಸರ್ಕಾರವು ನಿರ್ಧಾರ ತೆಗೆದುಕೊಂಡಿತ್ತು. ಆಗ ದಿ. ಮನೋಹರ್ ಪರೀಕರ್ ಗೋವಾ ಮುಖ್ಯಮಂತ್ರಿಯಾಗಿದ್ದರು. ಆಗ್ವಾದ್ ಜೈಲಿನ ಹತ್ತಿರ ಮತ್ತು ಜುವಾರಿ ಸೇತುವೆಯ ಪೂರ್ವ ಮತ್ತು ಪಶ್ಚಿಮ, ಶಾಪೋರಾ ನದಿಯಲ್ಲಿ ಕ್ಯಾಸಿನೊ ಸ್ಥಳಾಂತರಕ್ಕೆ ಚಿಂತಿಸಲಾಗಿತ್ತು. ಆದರೆ ಅದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿತ್ತು.