ಸುದ್ಧಿಕನ್ನಡ ವಾರ್ತೆ
Goa: ಗೋವಾ ಕನ್ನಡ ಸಮಾಜವು ಕಳೆದ ಹಲವು ವರ್ಷಗಳಿಂದ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರಕ್ತದಾನವು ಶ್ರೇಷ್ಠ ದಾನ, ಇದರಿಂದಾಗಿ ನಮ್ಮ ಯುವ ಪೀಳಿಗೆಗೆ ಕೂಡ ಸ್ಪೂರ್ತಿ ನೀಡುತ್ತದೆ. ರಕ್ತದಾನ ಮಹಾದಾನವಾಗಿದೆ. ಗೋವಾದಲ್ಲಿ ಕನ್ನಡಿಗರೆಲ್ಲ ಒಗ್ಗೂಡಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆ ತರುತ್ತದೆ ಎಂದು ಉದ್ಯಮಿ ವಿನಾಯಕ ಎಂ. ಶಾನಭಾಗ್ ನುಡಿದರು.

ಗೋವಾ ವಿಮುಕ್ತಿ ದಿನದ ಅಂಗವಾಗಿ ಡಿಸೆಂಬರ್ 19 ರಂದು ಬೆಳಿಗ್ಗೆ ಗೋವಾ ಮೆಡಿಕಲ್ ಕಾಲೇಜು ಬಾಂಬೋಲಿಂ ಬ್ಲಡ್ ಬ್ಯಾಂಕ್ ವಿಭಾಗದಲ್ಲಿ (Goa GMC)  ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು, ಇವರ ಸಹಯೋಗದಲ್ಲಿ ಗೋವಾ ಕನ್ನಡ ಸಮಾಜ ಪಣಜಿ, ಗೋವಾ ಕೇಸರಿ ಮತ್ತು ಶ್ರೀಮೀಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ರಕ್ತದಾನ ಶಿಭಿರ”ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಗೋವಾದಲ್ಲಿ ಲಕ್ಷಾಂತರ ಜನರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ನಮ್ಮ ಜನ್ಮಭೂಮಿ ಕರ್ನಾಟಕ ಕರ್ಮಭೂಮಿ ಗೋವಾ. ಕನ್ನಡಿಗರು ಒಟ್ಟಾಗಿ ರಕ್ತದಾನದಂತಹ ಕಾರ್ಯಕ್ರಮ ಹಮ್ಮಿಕೊಂಡು ತುರ್ತು ಪರಿಸ್ಥಿತಿಯಲ್ಲಿರುವಂತಹ ಜೀವ ಉಳಿಸುವಂತಹ ಕಾರ್ಯ ಕೈಗೊಂಡಿದ್ದೀರಿ ಎಂದು ವಿನಾಯಕ ಶಾನಭಾಗ್ ನುಡಿದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ಕನ್ನಡ ಸಮಾಜ ಪಣಜಿಯ ಅಧ್ಯಕ್ಷ ಅರುಣಕುಮಾರ್ ಮಾತನಾಡಿ- ಪ್ರತಿ ವರ್ಷದಂತೆಯೇ ಪ್ರಸಕ್ತ ವರ್ಷವೂ ಕೂಡ ಇಂದು ನಾವು ರಕ್ತದಾನ ಶಿಭಿರ ಆಯೋಜಿಸಿದ್ದೇವೆ. ಈ ಶಿಭಿರದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಗೋವಾ ಕೇಸರಿ ದಿನಪತ್ರಿಕೆಯ ಸಂಪಾದಕರಾದ ಶ್ರೀನಿವಾಸ್ ಪೈ, ಶ್ರೀಮೀಡಿಯಾ ನ್ಯೂಸ್ ಸಂಪಾದಕ ಪ್ರಕಾಶ್ ಭಟ್, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಗೋವಾ ಕೇಸರಿಯ ಶ್ರೀನಿವಾಸ್ ಪೈ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ ಲೋಣಿ ವಂದನಾರ್ಪಣೆಗೈದರು.

ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಸಹಕಾರ್ಯದರ್ಶಿ ಪ್ರಲ್ಹಾದ ಗುಡಿ, ಗೋವಾಕನ್ನಡ ಸಮಾಜದ ಕಾರ್ಯಕಾರಿ ಸಮೀತಿಯ ಸದಸ್ಯರಾದ ಶಾಮಸುದ್ದೀನ ಸೊಲ್ಲಾಪುರಿ, ಮಂಜುನಾಥ ದೊಡ್ಡಮನಿ, ನೀರಜ್ ದಿವಾಕರ್, ಸಿ.ಜಿ.ಕಣ್ಣೂರ ಮತ್ತಿತರರು. ಸಭಾ ಕಾರ್ಯಕ್ರಮದ ನಂತರ ಹತ್ತಾರು ಜನ ಕನ್ನಡಿಗರು ರಕ್ತದಾನ ಮಾಡಿದರು.