ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಚಳಿ ಜೋರಾಗಿದೆ. ಫೆಂಗಲ್ ಚಂಡಮಾರುತದಿಂದ ಮಳೆ ಹಾಗೂ ಉಷ್ಣತೆ ಹೆಚ್ಚಳವಾಗಿತ್ತು. ಆದರೆ ಇದೀಗ ಮತ್ತೆ ಗೋವಾದಲ್ಲಿ ಚಳಿ ಜೋರಾಗಿದೆ. ಗೋವಾದಲ್ಲಿ ಸದ್ಯ ತಾಪಮಾನ 19.4ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ವರ್ಷ ಇದುವರೆಗೂ ಗೋವಾದಲ್ಲಿ ಇದು ಅತ್ಯಂತ ಕಡಿಮೆ ತಾಪಮಾನವಾಗಿದೆ. ಕಳೆದ ನವೆಂಬರ್ 29 ರಂದು 19.6 ಕ್ಕೆ ತಾಪಮಾನ ಇಳಿಕೆಯಾಗಿತ್ತು.
ಗೋವಾದಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಚಳಿ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಸರಾಸರಿ ತಾಪಮಾನ 20 ಡಿಗ್ರಿಗಳಷ್ಟು ಇರಲಿದೆ. ಸದ್ಯ ಗೋವಾದಲ್ಲಿ ಚಳಿ ಜೋರಾಗಿರುವ ಕಾರಣ ಜನತೆ ಸ್ವೇಟರ್, ಮಾಪಲರ್, ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಚಳಿಯಿಂದ ರಕ್ಷಿಸಿಕೊಳ್ಳಲು ಅಗತ್ಯ ಕಾಳಜಿ ತೆಗೆದುಕೊಳ್ಳುವಂತೆ ಹವಾಮಾನ ಇಲಾಖೆ ರಾಜ್ಯದ ಜನತೆಗೆ ಸೂಚನೆ ನೀಡಿದೆ.